ಆರೋಗ್ಯಕರ ಚಕ್ಕೋತ
ದೊಡ್ಡ ಗಾತ್ರದಲ್ಲಿರುವ ಚಕ್ಕೋತ ಕಾಯಿಗಳು ನಿಂಬೆ,ಮೋಸಂಬಿ,ಕಿತ್ತಳೆ ಹಣ್ಣನ್ನು ಹೋಲುತ್ತವೆ.ಗುಣದಲ್ಲಿಯೂ ಅವುಗಳಂತೆಯೇ ವಿಟಮಿನ್ ಸಿ ಅಧಿಕವಾಗಿರುವ ಹಣ್ಣು. ಚಕ್ಕೋತವು ದಪ್ಪನೆಯ ಸಿಪ್ಪೆಯನ್ನು ಹೊಂದಿದ್ದು ಒಳಗೆ ಎಸಳುಗಳನ್ನು ಬಿಳಿಯ ಪದರ ಆವರಿಸಿರುತ್ತದೆ. ಅವುಗಳನ್ನು ಬಿಡಿಸಿದರೆ ನಸುಗೆಂಪು ಬಣ್ಣದ ದೊಡ್ಡದಾದ ಎಸಳುಗಳು ಸಿಹಿ ಮಿಶ್ರಿತ ಒಗರು ರುಚಿಯನ್ನು ಹೊಂದಿದೆ .ಕೆಲವೊಮ್ಮೆ ಸ್ವಲ್ಪ ಕಹಿ ಇರಬಹುದು. ಇದು ತಿನ್ನಲು ಬಹಳ ರುಚಿಕರ ಎಂದೆನಿಸದಿದ್ದರೂ ಆರೋಗ್ಯಕ್ಕೆ ಮಾತ್ರ ಹಿತಕರ.
ಇದರಲ್ಲಿ ವಿಟಮಿನ್ ಎ , ವಿಟಮಿನ್ ಬಿ ಮತ್ತು ಸಿ ಜೀವಸತ್ವಗಳು ಹೇರಳವಾಗಿದ್ದು, ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತವೆ.
ಚಕ್ಕೋತ ಹಣ್ಣನ್ನು ಹಾಗೆಯೇ ತಿನ್ನಲು ಹೆಚ್ಚಿನವರು ಇಷ್ಟಪಡುತ್ತಾರೆ. ಇದರಿಂದ ಜ್ಯೂಸ್, ಸಲಾಡ್'ಗಳನ್ನು ಸಹ ಮಾಡಬಹುದು. ಇದು ಕಾಯಿಲೆಗಳಿಗೆ ರಾಮಬಾಣ.
ನಿಂಬೆಹಣ್ಣು ಕಿತ್ತಳೆಹಣ್ಣಿನಂತೆ ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. ಮೂತ್ರನಾಳದ ಸೋಂಕು ನಿವಾರಿಸುವ ಗುಣ ಹೊಂದಿದೆ. ಹೃದಯದ ಆರೋಗ್ಯಕ್ಕೂ ಉತ್ತಮ.ವಿಟಮಿನ್-ಸಿ ಹೇರಳವಾಗಿರುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಶೀತ,ಅಲರ್ಜಿ , ಅಸ್ತಮಾ ಸಮಸ್ಯೆ ಇರುವವರಿಗೆ ಉತ್ತಮ.
ಚಕ್ಕೋತ ಜ್ಯೂಸ್ :-
ಚಕೋತ ಹಣ್ಣುಗಳನ್ನು ಸುಲಿದು ಒಳಗಿನ ಬಿಳಿಯ ಪದರವನ್ನು ತೆಗೆದು ತಿರುಳನ್ನು ಆಯ್ದು ಇಟ್ಟುಕೊಳ್ಳಬೇಕು. 1 ಕಪ್ ತಿರುಳಿಗೆ ,ಕಾಲು ಕಪ್ ಸಕ್ಕರೆ , ಸ್ವಲ್ಪ ನೀರು (ಬೇಕಾದಲ್ಲಿ ಚಿಟಿಕೆ ಉಪ್ಪು)ಹಾಕಿ ಮಿಕ್ಸಿಗೆ ಹಾಕಿ ಜ್ಯೂಸ್ ತಯಾರಿಸಿಕೊಂಡು, ರುಚಿ ನೋಡಿ ಬೇಕಾದಲ್ಲಿ ಸಕ್ಕರೆ ಸೇರಿಸುವುದು. ಇದನ್ನು ನೀರು ಬೆರೆಸಿ ಸೋಸಿ . ಬಹಳ ರುಚಿಕರವಾದ ಜ್ಯೂಸ್ ಅಲ್ಲದಿದ್ದರೂ ಆರೋಗ್ಯವರ್ಧಕ ಜ್ಯೂಸ್.
✍️..ಅನಿತಾ ಜಿ.ಕೆ.ಭಟ್.
16-09-2020.
ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ Home ,> ಸಂಕೇತಗಳನ್ನು ಬಳಸಿಕೊಳ್ಳಬಹುದು
👌👌😋😋
ReplyDelete😋💐🙏
Delete