Friday, 2 October 2020

ಹಿರಿಯ ಸಂಪಾದಕಿಗೆ ಬೀಳ್ಕೊಡುಗೆ-ನೂತನ ಸಂಪಾದಕಿಗೆ ಸುಸ್ವಾಗತ

 


ಮಾತೃಪ್ರಚೋದಕಿ
              
ಮಿಂಚಿನ ಚುರುಕಿನ
ಸುಜ್ಞಾನದ ದಿವ್ಯ ದೀವಿಗೆ
ಸೌಜನ್ಯಪೂರ್ಣ ಸಂಸ್ಕಾರದ
ಕನ್ನಡ ಬ್ಲಾಗಿನ ಮಾತೃ ಪ್ರಚೋದಕಿ||೧||

ಕರಶಿರಕೆ ಚೈತನ್ಯದಾಯಿ ಸ್ಪರ್ಧೆ
ತಾಯ್ತನ ಬಾಲಲೀಲೆಗಳ ಅಕ್ಷರದ ಮಣಿಮಾಲೆ
ಅಹರ್ನಿಶಿ  ಕಾರ್ಯತತ್ಪರರಾಗಿ
ಹರಿವಂತೆ ಮಾಡಿದಿರಿ ಮಾತೃಸಾಹಿತ್ಯಸುಧೆ||೨||

ನಿಮ್ಮ ಸಲಹೆ ಸಹಕಾರ
ಸ್ನೇಹ ಕಾಳಜಿ ಅನುಪಮ
ನೀವು ನಮ್ಮೊಡನೆ ಬೆರೆತ ದಿನಗಳ
ಸವಿನೆನಪುಗಳು ಹೃದಯಂಗಮ||೩||

ಬದಲಾವಣೆಯ ಮಗ್ಗುಲು ಬಯಸಿ
ತೆರೆಯೆಳೆದು ಸರಿದ ನೀವು ದಿವ್ಯದರ್ಶಿನಿ
ಸುಪ್ರೀತಿಯಿಂದ ಒಲವ ಹೂಮುಡಿದು
ಯಶಗಳಿಸಿ ತೇಜಸ್ವಿ ಮಾರ್ಗದರ್ಶಿನಿಯಾಗಿ||೪||
                  
                     🌲🌲🌲🌲

              ದಿವ್ಯದರ್ಶಿನಿ-ದಿಗ್ದರ್ಶಿನಿ

ದಿಕ್ಸೂಚಿಯಾದಿರಿ ಅಕ್ಷರಸಾಂಗತ್ಯದ ಪಥಕೆ ದಿ- ವ್ಯತೆಯ ಭಾವಸಿಂಧು ಮಾತೃ ಹೃದಯಕೆ
ರ್ಪವಿನಿತಿಲ್ಲದ ಸೌಜನ್ಯಮೂರ್ತಿ ದೂರದ-
ರ್ಶಿತ್ವದಿ ಮುನ್ನಡೆಸಿ ಕನ್ನಡ ಮಾತೆಯರಬ್ಲಾಗು
ನಿತ್ಯ ನಿರಂತರ ಹರಿವಂತೆ ಮಾತೃಶಿಶುಕಾವ್ಯ||

ಸುಪ್ರೀತಿತುಂಬಿದ ಹೂವ ಹಾಸಿನಲಿ
ಪ್ರೀತಿಸುತ್ತ ಪ್ರತಿಕ್ಷಣವು ಬಾಳಬುಟ್ಟಿಯಲಿ
ತಂತಿ ಮೀಟುತ ಹೃದಯವೀಣೆಯ ಇಂಪನು
ತೇಲಿಸಿ ವಿಹರಿಸಿ ಕನಸು ನನಸಾಗಿಸಿ
ತನದಿ ಜಾಣ ಕುವರನ ಕಾಯ್ದು ಯಶ-
ಸ್ವಿಗೊಳಿಸಲು ದಿಗ್ದರ್ಶಿನಿಯಾಗಿ ಅನವರತ...||

          🌴🌴🌴🌴🌴🌴

ಆನ್ಲೈನ್ ವಿದಾಯಕೂಟ

ಭಾವಪೂರ್ಣ ಕಾರ್ಯಕ್ರಮ
ಹರಿದುಬಂದ ನುಡಿಗಳು ಅಪೂರ್ವ
ಒಬ್ಬರನೊಬ್ಬರು ಬೆನ್ನುತಟ್ಟಿ
ಅಭಿನಂದಿಸಿದ ಪರಿ ಅಭೂತಪೂರ್ವ||

ಜೊತೆ ಸೇರುತಲಿ ಆನ್ಲೈನ್
ವಿದಾಯಕೂಟ ನಡೆಸಬಹುದು
ಸಂತಸದ ಸಮಯವನ್ನು
ಸವಿನೆನಪಿಗಾಗಿ ಉಳಿಸಬಹುದು||

ತೋರಿಸಿಕೊಟ್ಟರು ಮಾಮ್ಸ್ಪ್ರೆಸೊ
ದಲ್ಲರಳಿದ ಸುಮಾ ಮುಂಜಾನೆಯ
ಸೂರ್ಯ ರಶ್ಮಿ ಹಿಮದ ಮುಸುಕಿನ
ಶ್ವೇತ ಪುಷ್ಪ ಜಗವಬೆಳಗುವ ಜ್ಯೋತಿ||

ದುಂಬಿಗಳ ಝೇಂಕಾರದ ಕವಿತೆ
ಉಷೆಯಲಿ ನಸುಬಿರಿದ ಪದ್ಮ
ಶೈಲವೂ ತನ್ಮಯತೆಯಿಂದ ಭಾಗ್ಯವ
ನೆನೆದು ಪ್ರಿಯವಾಣಿಯ ಉಲಿದವು||

ಅನಿತ ಪ್ರಜ್ಞೆಯ ಪೂರ್ಣಿಮೆಯ
ಚಂದಿರ ಶಾನೆ ನಾಚಿ ತೆರೆಗೆ ಸುರಿದು
ರವಿಯು ವಿದ್ಯಾ ಯಶದೀಪವ ಬೆಳಗಿ
ದಿವ್ಯತೇಜದಿ ಮನಸನು ಧನ್ಯವಾಗಿಸಿದ||

ಅರ್ಹ ವ್ಯಕ್ತಿಗೆ ಸುಂದರ ಬೀಳ್ಕೊಡುಗೆ
ಸಂಧ್ಯೆ,ಸೀಮೆಯಿಲ್ಲ ಸ್ತ್ರೀಒಗ್ಗಟ್ಟಿನ ಶಕ್ತಿಗೆ
ಮತ್ತೊಮ್ಮೆ ಸಿಗೋಣ ಎಲ್ಲರೂ ಒಟ್ಟಿಗೆ
ಇದು ಮಾಮ್ಸ್ಪ್ರೆಸೊ ಶಿಲ್ಪಿಯ ಕೊಡುಗೆ||

               🌱🌱🌱🌱🌱🌱

ಸುಸ್ವಾಗತ

ಪ್ರತಿಭಾವಂತ ಬರಹಗಾರ್ತಿ
ಅರ್ಹ ಮಾತೆ ಭಿಡೆ ಶ್ವೇತ
ಮೊಮ್ಸ್ಪ್ರೆಸೋ ಸಂಪಾದಕಿಯಾಗಿ
ನಿಮಗೆ ಆದರದ ಸ್ವಾಗತ||

ಭಾಷಾ ಶುದ್ಧತೆ ಸ್ಪಷ್ಟ ನಿರೂಪಣೆ
ವಿಭಿನ್ನ ಚಿಂತನೆಯೆಡೆ ಗಮನ
ಕಲೆ ಕಸೂತಿ ಗಾಯನ ಅಡುಗೆ
ಸದಾ ಕಾಯ್ದುಕೊಳ್ಳಲಿ ಹೊಸತನ||

ಹಿರಿ ಸಂಪಾದಕಿಯ ಕನಸು
ನಿಮ್ಮ ಶ್ರದ್ಧೆ ದೂರದರ್ಶಿತ್ವ
ಜೊತೆಗೆ ಸಾಗಲಿ ಮೊಮ್ಸ್ಪ್ರೆಸೋ
ಗೆಲ್ಲಲಿ ಕನ್ನಡಿಗರ ಮಾತೃತ್ವ||

ಸರ್ವರಲಿ ಸಮಭಾವ
ಪ್ರೋತ್ಸಾಹ ಮನ್ನಣೆ
ತೆರೆಮರೆಯ ತಾಯಂದಿರ
ಕರೆತರುವ ಹೊಣೆ||

ನಿಮ್ಮ ಕ್ರಿಯಾಶೀಲತೆ ಪ್ರಾಮಾಣಿಕತೆ
ಬದ್ಧತೆಯಲ್ಲಿ ಕಾಣಲಿ ಮೊಮ್ಸ್ಪ್ರೆಸೋ ಉತ್ತುಂಗ
ತಾಯ್ತನದೊಂದಿಗೆ ನರಳದೆ ಅರಳುತ
ಬೆಳೆಯಬೇಕು ಕನ್ನಡದ ಮಹಿಳಾ ರಂಗ||

✍️... ಅನಿತಾ ಜಿ.ಕೆ.ಭಟ್.
02-10-2020.


ಮಾಮ್ಸ್ಪ್ರೆಸೊ ಹಿರಿಯ ಸಂಪಾದಕಿಯ ಬೀಳ್ಕೊಡುಗೆ ಹಾಗೂ ನೂತನ ಸಂಪಾದಕಿಯ ಸುಸ್ವಾಗತದ ಸಲುವಾಗಿ ರಚಿಸಿದ ಸರಳ ಕವನಗಳು.


1 comment: