Monday, 5 October 2020

ರದ್ದಾದ ಭೇಟಿ...#ಚಿತ್ರಕ್ಕೊಂದು ಪುಟ್ಕಥೆ

 


ರದ್ದಾದ ಭೇಟಿ

ಸಂತೋಷ್ ಚೌಧರಿ ದೊಡ್ಡ ಉದ್ಯಮಿ. ಪ್ರಪಂಚದಾದ್ಯಂತ ವಿಸ್ತರಿಸಿದೆ ಅವನ ವಿಮಾನ,ಮದ್ಯದ ಉದ್ಯಮ.ಈಗ ಬ್ರಿಟನ್ ನಲ್ಲಿ ನೆಲೆನಿಂತು ವ್ಯವಹಾರವನ್ನು(ಕಳ್ಳ....!!) ನಿಭಾಯಿಸುತ್ತಿದ್ದಾನೆ.ಒಂದು ದಿನ ಚೌಧರಿಗೆ ಭಾರತಕ್ಕೆ ವ್ಯವಹಾರದ ಹಣಕಾಸಿನ ವಿಚಾರದಲ್ಲಿ ಬರಲೇಬೇಕಾಗಿತ್ತು.

ವಿಮಾನದಲ್ಲಿ ಪ್ರಯಾಣಮಾಡಲು ನಿರ್ಧರಿಸಿದ್ದನು.ಅಷ್ಟರಲ್ಲಿ ಏಕೋ ಅವನಿಗೆ ಏನೋ ಅಪಶಕುನ ಕಂಡಿತು.. ಸರಿ.. ಕೂಡಲೇ ಆಪ್ತ ಸಲಹೆ ನೀಡುವ ಜ್ಯೋತಿಷಿ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಓಂಕಾರ ಗುರುಗಳಿಗೆ ಕರೆ ಮಾಡಿ ವಿಷಯ ತಿಳಿಸಿದ..

"ಬ್ರಹ್ಮಾನಂದ ಬ್ರಹ್ಮಾನಂದ..ದೇವ್ರು ದೊಡ್ಡೋನು... ಏನು ಅನಾಹುತ ಆಗ್ತಿತ್ತು ನೋಡಿ...ನನ್ನ ಕೇಳ್ಳಿಲ್ಲಾಂದ್ರೆ.. ದೊಡ್ಡ ಕಂಟಕ ಇತ್ತು ನೋಡಿ ನೀವು ಹೊರಡುವ ಹೊತ್ತಿಗೆ...ಅದಕೊಂದು ಸಣ್ಣ ಶಾಂತಿ ಹೋಮ ಮಾಡ್ಸಿದ್ರೆ ತೊಂದ್ರೆ ಎಲ್ಲ ಹರೋ ಹರ..ನಿನ್ನ ಪ್ರಯಾಣ ಸುಖಕರ.." ಎಂದ ಜ್ಯೋತಿಷಿಯ ಮಾತಿಗೆ ಒಪ್ಪಿದ ಚೌಧರಿ ಹೊರಡಲು ಒಂದೇ ತಾಸು ಬಾಕಿ.. ವಿಮಾನ ನಿಲ್ದಾಣದಲ್ಲೇ ಹೋಮ ಮಾಡಲು ಅಪ್ಪಣೆಯಿತ್ತ..

ಜ್ಯೋತಿಷಿಗಳು ತಮ್ಮ ಶಿಷ್ಯರಿಬ್ಬರನ್ನು ಪುರೋಹಿತರಾಗಿ ಕಳುಹಸಿಕೊಟ್ಟರು.ಹೋಮದ ತಯಾರಿಯೆಲ್ಲ ಆದರೂ ಚೌಧರಿಯನ್ನು ಕಾಣದ ಪುರೋಹಿತರು **"ಇನ್ನೂ ಮಡಿ ಹಚ್ಚಿದ್ದಿಲ್ಯನಾ "** ಎಂದು ಕೂಗಿಕೊಂಡರು...ಪುರೋಹಿತರ ಗಟ್ಟಿದನಿ ಕೇಳಿದ ಚೌಧರಿಯ ಸಹಾಯಕ ಬಂದು "ಭಾರತದ ಪೋಲೀಸರು ಬಂಧಿಸುವ ಯೋಜನೆ ರೂಪಿಸಿದ್ದು ತಿಳಿದು ಬಾಸ್ ...ಭಾರತದ ಭೇಟಿ ರದ್ದುಗೊಳಿಸಿದ್ದಾರೆ.. ನಿಮಗೆ ತಿಳಿಸಲು ಹೇಳಿರುವರು"ಎಂದು ನುಡಿದ.

ಪುರೋಹಿತರು "ಹಾಗಾದರೆ ನಮ್ಮ ಫೀಸು....😱😰"ಎಂದು ಗೋಳಿಟ್ಟರು..

✍️.. ಅನಿತಾ ಜಿ.ಕೆ.ಭಟ್.
06-10-2020.

ಚಿತ್ರ: ಹವಿಸವಿ ಕೃಪೆ



No comments:

Post a Comment