Monday, 5 October 2020

ನಿಜ ನಾಯಕ..#ಚಿತ್ರಕ್ಕೊಂದು ಕವನ

 


ನಿಜ ನಾಯಕ

ಕಾರ್ಮೋಡದ ಬಾನು
ಸುತ್ತಲೂ ಹಸಿರು ಕಾನು
ಕುಂಟೆಯೆತ್ತಿಹ ರೈತನು
ಜೋಡೆತ್ತ ಹೂಡುವ ಮಾಂತ್ರಿಕನು ||

ಹುದುಗುತಿವೆ ಕಾಲು
ಗುಡುಗುತಿದೆ  ಮೋಡ
ಅಡಿಗಡಿಗೆ ಪರಿಶ್ರಮ
ಉತ್ತು ಬಿತ್ತಿ ಬೆಳೆವ ಕ್ರಮ||

ಹೊನ್ನ ಹನಿ ಸಿಂಚನ
ಭೂರಮೆಯೆ ಪಾವನ
ಒಡಲಿಗೆ ನೇಗಿಲ ಗಾಯ
ಹಸಿರನುಟ್ಟ ಭೂಮಿ ತಾಯ||

ಒಡೆಯನಾಣತಿ ಮೀರದೆ
ದುಡಿಯುತಿಹ ಕರಿ ಹೋರಿ
ಹಿಂಡಿ ಬೈಹುಲ್ಲು ಸವಿದು
ಬೆವರಿಳಿಸಿ ಮೈಮುರಿದು ದುಡಿದು||

ಮಳೆ ಬಿಸಿಲು ಚಳಿಯೆನ್ನದ ರೈತ ಶ್ರಮಿಕ
ದಿನವೂ ಅನ್ನ ನೀಡುವ ಕಾಯಕ
ದಣಿವರಿಯದ ನಿಜ ನಾಯಕ
ಭೂದೇವಿಯ ಸೇವೆಯೇ ನಾಕ ||

✍️... ಅನಿತಾ ಜಿ.ಕೆ.ಭಟ್.
06-10-2020.
ಚಿತ್ರ:ಹವಿಸವಿ ಕೃಪೆ




No comments:

Post a Comment