Tuesday, 21 January 2020

ಅಂಗಳದ ಸಿಂಗಾರಿ




ಮನೆಯ ಮುಂಬಾಗಿಲ ಮುಂದೆ
ಸೇವಂತಿಗೆ ಹೂವು...
ಕಣ್ಣೋಟದಲ್ಲೆ ಮರೆಸುವೆ
ನನ್ನೆಲ್ಲ ನೋವು...
ರವಿಯು ನಾಚಿದ ನೋಡಿ
ನಿನ್ನ ಚೆಲುವು...
ಅರಳಲು ಕಾಯುತಿವೆ
ಮೊಗ್ಗು ಹಲವು...
✍️...ಅನಿ ಅಜಿ.ಕೆ.ಭಟ್.
"""""""""""""""""""""""""""""""""""""""""""""


ಬಿಂಕದ ಸಿಂಗಾರಿಗೆ ನಾ ಕೊಡೆ ಹಿಡಿಯಲೇ
ಶಶಿಯಂತೆ ನಾನೂ ತಂಪೀಯಲೇ
ಮುಗ್ಧ ಮನದಲ್ಲಿ ತುಂಬಿಟ್ಟುಕೊಳ್ಳಲೇ
ಮೃದುವಾದ ಹೃದಯದಲಿ ತುಸು ಜಾಗ ಕೊಡಲೇ...

✍️.. ಅನಿತಾ ಜಿ.ಕೆ.ಭಟ್.



ತಾಯಂದಿರಿಗೆಲ್ಲ 'ವಿಶ್ವ ತಾಯಂದಿರ ದಿನ'ದ ಶುಭಾಶಯಗಳು..

ನವಮಾಸ ಹೊತ್ತವಳು
ನೋವೆನದೆ ಹೆತ್ತವಳು
 ನವಿರಾಗಿ ಸಲಹಿದಳು
ನಗುತಲೇ ಬಾಳುವವಳು...

ಕಂದನ ಅರಿತವಳು
 ಕರೆಯದಲೆ ಬರುವವಳು
ಕೈಹಿಡಿದು ನಡೆಸಿದವಳು
ಕರುಣಾಮಯಿ ಮಾತೆಯವಳು...

ಮಾತೆಯರನ್ನು ಗೌರವಿಸೋಣ...🙏
✍️... ಅನಿತಾ ಜಿ.ಕೆ.ಭಟ್.


Theme # Anniversary special

🎁🎁🎁🎁🎁🎁🎁🎀🎀🎀🎀


ಶುಭ್ರ, ಶ್ವೇತ ಹೂವಿನ ಬಿಂಬ
ನಿರ್ಮಲ ಮನದ ಪ್ರತಿಬಿಂಬ
ಹಚ್ಚ ಹಸಿರಿನ ತರುವು
ಸಮೃದ್ಧಿಯ ಸಂಕೇತವು

ನಾನಾಗಬಯಸುವೆ ಬಿಳಿಯ ಪುಷ್ಪ
ಭೂರಮೆಯ ಪಚ್ಚೆ ಸೀರೆಯ ಮುಕುಟದಿ...
"""""""""""""""""""""""""""""""""""""""""""""""
🤝ನಮ್ಮ ಮನೆ ಕೈ ತೋಟದ ಪ್ರಥಮ ವಾರ್ಷಿಕೋತ್ಸವ ದ ಶುಭಾಶಯಗಳು.🎉🎁



✍️✍️ ಅನಿತಾ ಜಿ.ಕೆ.ಭಟ್.
🎈🎈🎈🎐🎐🎐🎄🎄🎄🎊🎊🎊

ಮೇಲಿನದು ನಮ್ಮ ಮನೆ ಕೈ ತೋಟ ಗುಂಪಿನಲ್ಲಿ ಬರೆದ ಚಿತ್ರ ಬರಹಗಳು...

No comments:

Post a Comment