ಹಿಗ್ಗಿ ಹಿಗ್ಗಿ ನಲಿವ ಸುಗ್ಗಿ
ಬಂದಿತೀಗ ಭರದಿ
ತೆನೆಗಳೀಗ ಭುವಿಗೆ ಬಾಗಿ
ರವಿಯ ಭ್ರಮಣೆ ನಭದಿ...||೧||
ದಕ್ಷಿಣದಿಂ ಉತ್ತರಕೆ
ವಲಸೆಗೈದ ದಿನಕರ
ಹೇಮಂತನ ಮಾಗಿಚಳಿಗೆ
ಧನು ಕಳೆದು ಮಕರ...||೨||
ಎಳ್ಳು ಬೆಲ್ಲ ಎಲಚಿಯೆಲ್ಲ
ಹಂಚಿ ಸಿಹಿಯ ಸವಿದು
ಒಳ್ಳೆ ನುಡಿ ಸಮರಸತೆಯ
ಸದ್ಭಾವವು ಮೈತಳೆದು....||೩||
ದವಸಧಾನ್ಯ ರಾಶಿಕಂಡು
ರೈತನಮೊಗದಿ ಕಾಂತಿ
ಮನೆಮನದಿ ಸಂಪ್ರೀತಿಯ
ತುಂಬುವ ಹಬ್ಬ ಸಂಕ್ರಾಂತಿ...||೪||
ಹೊಸಬಟ್ಟೆ ಧರಿಸಿ ಹೊಸ
ಅಕ್ಕಿಯಿಂದ ಹುಗ್ಗಿ
ಹರೆಯ ವೃದ್ಧ ಭೇದವಿರದೆ
ಸಂಕ್ರಾಂತಿಯೆಂದು ಹಿಗ್ಗಿ...||೫||
✍️... ಅನಿತಾ ಜಿ.ಕೆ.ಭಟ್.
16-01-2020.
No comments:
Post a Comment