Wednesday, 29 January 2020

ತಲುಪಿರಿ ಬಾಲರೇ ಗಮ್ಯ



ಹಾರಿ... ಮೇಲಕೆ ಹಾರಿ
ನಡೆಸುತಲಿಹರು ಪೈಪೋಟಿ
ಬೀರಿ...ನಸುನಗೆ ಬೀರಿ
ಕಾಯ್ವವಗುಂಟೇ ಸರಿಸಾಟಿ||೧||

ಏರಿ ... ಎತ್ತರಕೇರಿ
ಸಾಧಿಸೆ ಬೇಕು ಛಲವು
ಮೀರಿ ... ಅಡೆತಡೆ ಮೀರಿ
ಗೆಲ್ಲಲು ದೇವನ ವರವು||೨|

ಅತ್ತ...ನೆಡುತ ಚಿತ್ತ
ಸಾಗುವ ಜೀವನದಾಟ
ಸುತ್ತ ... ಸರಿಸದೆ ಕತ್ತ
ದೃಷ್ಟಿ ನೇರದ ನೋಟ||೩||

ಬಿತ್ತಿ... ಸಾಹಸ ಬುದ್ಧಿ
ತುಂಬುತ ಚೈತನ್ಯ
ಹತ್ತಿ ...ಶಿಖರವ ಸಿದ್ಧಿ
ತಲುಪಿರಿ ಬಾಲರೇ ಗಮ್ಯ||೪||


✍️... ಅನಿತಾ ಜಿ.ಕೆ.ಭಟ್
29-01-2020.
ಚಿತ್ರ ಕೃಪೆ-ಕನ್ನಡ ಕಥಾಗುಚ್ಛ.


2 comments: