Thursday, 23 January 2020

ಒಲವೇ...



ನಿನ್ನ ಬೆಚ್ಚನೆಯ ಅಪ್ಪುಗೆಯಲ್ಲಿ
ನೋವನೆಲ್ಲ ಮರೆಸುವ ಶಕ್ತಿಯಿದೆ...

ನಿನ್ನೊಂದು ನಗುವಿನಲ್ಲಿ  ಮನವು
ಅರಳಿ ಕಂಪು ಬಿರಿಯುತಿದೆ...

ನಿನ್ನೊಂದು ನೋಟವು ಜನ್ಮಜನ್ಮದ
ಅನುಬಂಧದಂತೆ ಭಾಸವಾಗುತಿದೆ...

ನೀ ನನಗೆ ಸಿಕ್ಕ ಅಪರೂಪದ
ನಿಧಿಯೆಂದು ಮನವು ಸಾರುತಿದೆ...

ಮತ್ತೆ ಮತ್ತೆ ನಿನ್ನ ಬರುವಿಕೆಗೆ
ಕಾದಿರುವೆ ನಾನಿಲ್ಲಿ ನಿನ್ನ ರಾಧೆ...

✍️... ಅನಿತಾ ಜಿ.ಕೆ.ಭಟ್.
23-01-2020.

No comments:

Post a Comment