ಅಂತರಂಗ
ಎದೆಯ ಕದವ ತೆರೆದು ಬರೆಯೆ
ಮೂಡಿ ಕವನ ಚೆಂದನೆ
ಸಾಲು ಸಾಲಿನಲ್ಲಿ ಬೆರೆತು
ನಲಿದ ಮನದ ಚಿಂತನೆ||೧||
ವಿಷಯ ಹರವು ಸರಳ ಭಾವ
ಅರಳಿ ನಿಂತು ನಗುತಿದೆ
ವಿಮರ್ಶೆ ವಾದ ತಿರುಚಿನಿಂದ
ನರಳಿ ಸೊರಗಿ ಕೊರಗಿದೆ||೨||
ಹರಿವ ನೀರಿಗಾರು ದಾರಿ
ತೋರಿ ಶರಧಿ ಸೇರಿದೆ
ಕುದಿವಕುಲುಮೆ ನೋವಹಬೆಯು
ಬರಹಕಿಳಿದು ತಣಿದಿದೆ||೩||
ಮುದ್ದು ಮಗುವ ತೊದಲು
ಮಾತು ಚೆಂದವಲ್ಲವೇ..?
ಎದ್ದು ಬಿದ್ದು ನಡೆಯುವಾಗ
ಆಡಿ ನಗುವೆವೇ..?||೪||
ಮಗುವು ಬೀಳೆ ನಕ್ಕರವನು
ಸಹಜ ಗುಣದ ಮನುಜನೇ?
ಎಡವದಂಥ ದಾರಿಯದುವೆ
ಬರಿಯ ಮಿಥ್ಯ ಕಲ್ಪನೆ||೫||
ತಪ್ಪು ಎತ್ತಿ ಹಳಿಯುವಂಥ
ಲೇಖನಿಯು ಬರೆಯಲಾರದೇ..?
ಒಪ್ಪುವಂಥ ಸಾಲು ಬರೆದು
ನಿತ್ಯ ಮೆರೆಯಬಾರದೇ..?||೬||
ಬರೆವ ಶೈಲಿ ಯೋಚನೆಯಲಿ
ಇಹುದು ವ್ಯಕ್ತಿ ವ್ಯಕ್ತಿಗೆ ಭಿನ್ನತೆ
ತಿರುಚಿ ಕೆಡಿಸ ಹೊರಟವರಿಗೆ
ಕೊಡುವುದೆನಿತು ಮಾನ್ಯತೆ..????||೭||
✍️..ಅನಿತಾ ಜಿ.ಕೆ.ಭಟ್.
02-10-2020.
ಅರ್ಥಪೂರ್ಣವಾಗಿದೆ ✍👌
ReplyDeleteಧನ್ಯವಾದಗಳು 💐🙏
Deleteಮನ ಮುಟ್ಟುವ ಕವನ... ತುಂಬಾ ಚೆನ್ನಾಗಿದೆ...
ReplyDeleteಧನ್ಯವಾದಗಳು 💐🙏
Deleteತುಂಬಾ ಚೆನ್ನಾಗಿದೆ..👌❤
ReplyDeleteಧನ್ಯವಾದಗಳು 💐🙏
Deleteತಂಬಾಕು ಚೆನ್ನಾಗಿದೆ👌❤
ReplyDeleteಧನ್ಯವಾದಗಳು 💐🙏
Delete