ಬೀಸುವ ಸಮೀರ ಶರಧಿಗೆ ತೊಡಿಸಿದ
ಅಲೆಯ ಉಂಗುರ
ಅಸ್ತಮ ನೇಸರ ಹಾಸಿದ ದಿಗಂತದಿ
ಕಲೆಯ ವರ್ಣಚಾದರ||೧||
ದೋಣಿ ಪಯಣವು ಸಾಗಿ ಸಾಗಿ
ತೀರದಿ ತಾ ವಿರಮಿಸಿ
ವರ್ಣ ಭಾಸ್ಕರ ಊರ ತಿರುಗಿ
ಅರುಹಿದ ಈಗ ಬರುವೆ ನಿದ್ರಿಸಿ||೨||
ಕೊತ್ತಲಗಳು ಗಗನಚುಂಬಿಸಿ
ಸಂಜೆರಾಗದಿ ಪುಳಕಗೊಂಡು
ಹಕ್ಕಿಪಿಕ್ಕಿ ಗುಂಪುಗೂಡಿಸಿ
ತಮ್ಮ ಗೂಡಿಗೆ ಸೇರಿಕೊಂಡು||೩||
ಒಂಟಿಮರವು ತಾನು ಬಯಸಿದೆ
ಹಿಮದ ಹಾಸಿನ ಆಲಿಂಗನ
ಗಂಟೆಯೋಡುತ ಜನರಕಾಣದೆ
ಜಲಬಾನಿನ ಶುಭಮಿಲನ||೪||
ನೀರಿನಲೆಯಲಿ ತೇಲಿಬಂದಿದೆ
ಭವ್ಯಬದುಕಿನ ದೀವಿಗೆ
ಹುಟ್ಟುಹಾಕುತ ದೋಣಿನಡೆಸುವ
ನಮ್ಮ ಬಾಳಿನ ಹಾದಿಗೆ||೫||
✍️... ಅನಿತಾ ಜಿ.ಕೆ.ಭಟ್.
14-01-2020.
ಚಿತ್ರ-ಹವಿಸವಿ ಕೃಪೆ
ಸವಿಸವಿ ಬಳಗದ ವಾರದ ಚಿತ್ರ ಕವನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಕವನ..
ಚಂದದ ಚಿತ್ರಕ್ಕೆ ಒಪ್ಪುವ ಸುಂದರ ಕವನ
ReplyDeleteಧನ್ಯವಾದಗಳು 💐🙏
ReplyDelete