Friday, 17 January 2020

ಅಂಬಾಸಿಡರ್ ಕಾರಿನ ಕಥೆ #ಕವನ







ಏನಿದು ಕಾರು? ಓಹೋ ಸುಂದರ||
ಬುರ್ರನೆ ಬಂತೈ ಅಂಬಾಸಿಡರು ||1||

ಚಂದದ ಕಲರೂ|ಒಳ್ಳೆಯ ಖದರು||
ಕಾರಿನ ಮುಂದೆ ಮಕ್ಕಳಿಬ್ಬರು||2||

ಹಳ್ಳಿ ಪೇಟೆ|ನಿತ್ಯದ ಓಟ||
ಬಾಳೆ ಅಡಿಕೆ|ಸರಕು ಸಾಗಾಟ||3||

ಹಸಿರಿನ ನೋಟ|ಧೂಳಿನ ಮಾಟ||
ಹೊಂಡಗುಂಡಿ|ಸರಿಸಮ ಓಟ||4||

ಸಿರಿಕರ ಮನೆಕರೆ|ಸಿಂಗಾರಿ ಬಂಗಾರಿ||
ಮುಂದೆ ಬಡವರ ಉದರವ|ಪೊರೆದಿರುವುದು ಖರೆ||5||

ಹಿರಿಕಿರಿ ಜನರಿಗೂ ಸೀಟು|
ಕಿರಿಕಿರಿ ಇಲ್ಲದೆ ಗಟ್ಟಿಮುಟ್ಟು ||6||

ಹೊಸತರ ಕಾರು|ಸವಾಲಿನೆದುರು||
ಅಚ್ಚಳಿಸದೆ ಬರೆದರು|
ನಿನ್ನಯ ಮೆರುಗು ಹೆಸರು ||7||


ಜೀವನದ ಪಾಠ|ನಮದು ಕೆಲದಿನದ ಓಟ||


✍️...ಅನಿತಾ.ಜಿ.ಕೆ.ಭಟ್.
18-01-2020.
ಚಿತ್ರ ಕೃಪೆ :- ಹವಿಸವಿ ಬಳಗ.
ಹವಿಸವಿ ಬಳಗದ ವಾರದ ಭಾವ ಚಿತ್ರಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕವನ.



2 comments: