ಸಂಭ್ರಮದ ಗಣರಾಜ್ಯೋತ್ಸವ
ಚಿಣ್ಣರಿಗಿಂದು ಹಬ್ಬ
ಧ್ವಜಾರೋಹಣ ಗೈದವರು
ಊರಿನ ಹಿರಿಯ ಸುಬ್ಬ||
ಸುದೀರ್ಘ ಸಂವಿಧಾನ
ಭಾರತಕೆ ಮುಕುಟ
ನಾಟಕ ಸಾರಿದೆ ಸನಾತನ
ಸಂಸ್ಕ್ರೃತಿಯ ಕಿರೀಟ||
ಜಾತ್ಯಾತೀತತೆ ಪ್ರಜಾಪ್ರಭುತ್ವ
ಐಕ್ಯತೆಗೆ ನಾವು ಬದ್ಧ
ಸಂವಿಧಾನದ ಮಹತಿಯ
ಭಾಷಣಗೈದಿಹ ಸಿದ್ಧ||
ಗುರುಗಳಿಂದ ದೇಶಕಾಗಿ
ಹೋರಾಡಿದ ಗಣ್ಯರ ಗುಣಗಾನ
ಗಡಿಕಾಯುವ ಯೋಧರಿಗೆ
ನಮಿಸುವ ಸುದಿನ||
ಭಾರತೀಯರೆಲ್ಲ ಸಮಷ್ಟಿ
ಒಕ್ಕೊರಲಿನಲಿ ಹಾಡಿ
ನೆಲದಲಿ ನಮ್ಮಯ ಪುಣ್ಯಸೃಷ್ಟಿ
ಬಾಗುವೆವವಳ ಪಾದದಡಿ||
ಚಿಣ್ಣರಿಗೆಲ್ಲ ಸಿಹಿ ಹಂಚಿ
ದೇಶಭಕ್ತಿಯ ಮೂಡಿಸುತ
ಬಾಲರಲಿ ತುಂಬಿಕೊಂಡಿತು
ಕಣಕಣದಲ್ಲೂ ಭಾರತೀಯತೆ||
✍️... ಅನಿತಾ ಜಿ.ಕೆ.ಭಟ್.
26-01-2020.
👏👏
ReplyDeleteಧನ್ಯವಾದಗಳು 💐🙏
ReplyDelete