ಗುಜ್ಜೆ/ಎಳೆಹಲಸಿನ ಕಾಯಿ ಪಲ್ಯ
ಬೇಸಿಗೆ ಬಂದರೆ ಸಾಕು ಹಲಸಿನ ಕಾಯಿಯು ನಮ್ಮ ಅಡುಗೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಳ್ಳುತ್ತದೆ.ಎಳೆ ಹಲಸಿನ ಕಾಯಿಯಿಂದ ಹಿಡಿದು ಹಣ್ಣಿನವರೆಗೂ ನಾನಾ ಪಾಕ ವೈವಿಧ್ಯಗಳನ್ನು ತಯಾರು ಮಾಡಬಹುದು.ಬಲಿತ ಹಲಸಿನ ಕಾಯಿ ಮತ್ತು ಹಣ್ಣಿಗಿಂತ ಎಳೆಯ ಹಲಸಿನ ಕಾಯಿ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತಾರೆ ಹಿರಿಯರು.ಕಾರಣ ಇದರಲ್ಲಿ ವಾಯುವಿನ ಅಂಶ ಕಡಿಮೆಯಿದ್ದು ಕನರು/ಒಗರು ರುಚಿಯನ್ನು ಹೊಂದಿರುತ್ತದೆ.
ಗುಜ್ಜೆಯಿಂದ ತಯಾರಿಸಬಹುದಾದ ರುಚಿಕರವಾದ ಪಲ್ಯವನ್ನು ಹೇಗೆ ಮಾಡುವುದು ಎಂದು ನೋಡೋಣ..
ಬೇಕಾದ ಸಾಮಗ್ರಿಗಳು...
ಎರಡು ಕಪ್ ಹಲಸಿನ ಹೋಳುಗಳು
ನೆನೆಸಿದ ಕಡಲೆಕಾಳು
ಕಾಲು ಕಪ್ ತೆಂಗಿನ ತುರಿ
ಮೆಣಸಿನ ಪುಡಿ -2 ಚಮಚ
ಅರಿಶಿನ ಪುಡಿ- ಕಾಲು ಚಮಚ
ಉಪ್ಪು-2 ಚಮಚ
ಬೆಲ್ಲ-2 ಚಮಚ
ನೀರು
ಒಗ್ಗರಣೆಯ ಸಾಮಗ್ರಿಗಳು
ಮಾಡುವ ವಿಧಾನ...
ಕಡಲೆ ಕಾಳನ್ನು ಏಳೆಂಟು ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕು.ಕುಕ್ಕರಿನಲ್ಲಿ ಮೂರು ಸೀಟಿ ಕೂಗಿಸಿ.ಗುಜ್ಜೆಯನ್ನು ತುಂಡುಗಳಾಗಿ ಮಾಡಿ ನೀರಿನಲ್ಲಿ ಹಾಕಿಡಿ.ಸ್ವಲ್ಪ ಹೊತ್ತಿನ ಬಳಿಕ ಕುಕ್ಕರಿನಲ್ಲಿ ಸ್ವಲ್ಪ ನೀರು ಹಾಕಿ ಮೂರು ಸೀಟಿ ಕೂಗಿಸಿ.ಪ್ರೆಶರ್ ಹೋದ ಬಳಿಕ ಗುಜ್ಜೆಯ ತುಂಡುಗಳನ್ನು ಪುಡಿಮಾಡಿಕೊಳ್ಳಿ.
ಬಾಣಲೆಗೆ ತೆಂಗಿನೆಣ್ಣೆ ಹಾಕಿ ಅದರಲ್ಲಿ ಹುಡಿ ಮಾಡಿದ ಗುಜ್ಜೆ,ಬೇಯಿಸಿದ ಕಡಲೆಕಾಳು, ಮೆಣಸಿನ ಪುಡಿ,ಅರಶಿನ ಪುಡಿ, ಉಪ್ಪು,ಬೆಲ್ಲ, ಸ್ವಲ್ಪ ನೀರು ಹಾಕಿ ಬೇಯಿಸಿ.ಕೊನೆಯಲ್ಲಿ ತೆಂಗಿನಕಾಯಿ ತುರಿ ಹಾಕಿ ಮಗುಚಿ ಕೆಳಗಿಳಿಸಿ.
ನಂತರ ಒಗ್ಗರಣೆಗೆ ಎಣ್ಣೆ ಧಾರಾಳವಾಗಿ ಬಳಸಿ.ಉಳಿದ ಪಲ್ಯಗಳಿಗಿಂತ ಇದಕ್ಕೆ ಎಣ್ಣೆ ಜಾಸ್ತಿ ಇದ್ದರೇ ರುಚಿ.ಸಾಸಿವೆ, ಉದ್ದಿನಬೇಳೆ,ಕೆಂಪುಮೆಣಸಿನ ಕಾಯಿ ಹಾಕಿ ಒಗ್ಗರಣೆ ಚಟಪಟ ಸಿಡಿಸಿ ,ಬಾಣಲೆಯಲ್ಲಿರುವ ಪಲ್ಯದ ಮಧ್ಯದಲ್ಲಿ ಸ್ವಲ್ಪ ಗುಂಡಿಮಾಡಿ ಕರಿಬೇವಿನ ಸೊಪ್ಪು ಹಾಕಿ.. ಒಗ್ಗರಣೆಯನ್ನು ಹಾಕಿರಿ.ಅದರ ಮೇಲೆ ಪಲ್ಯವನ್ನು ಮುಚ್ಚಿ.ಬಾಣಲೆಗೆ ಮುಚ್ಚಳ ಮುಚ್ಚಿ ಹತ್ತು ನಿಮಿಷ ಹಾಗೇ ಬಿಡಿ.ನಂತರ ಎಲ್ಲವನ್ನೂ ಮಿಶ್ರಮಾಡಿ ..ಬಿಸಿ ಬಿಸಿ ಅನ್ನದ ಜೊತೆ ಸೇವಿಸಿ...ಸೂಪರಾಗಿರುತ್ತೆ..👌👌👌👌😋😋😋😋
✍️... ಅನಿತಾ ಜಿ.ಕೆ.ಭಟ್.
12-04-2020.

ರುಚಿಯಾದ ಪಲ್ಯ...
ReplyDeleteThank you...
Delete