ಆದಿ ಅಂತ್ಯದ ನಡುವೆ
ಸಾಗುತಿದೆ ಪಯಣ
ಅಂಧಕಾರವ ಕಳೆದು
ರವಿ ಉದಿಸಿದ ಮೂಡಣ..||
ಸಾಗುತಿದೆ ಪಯಣ
ಅಂಧಕಾರವ ಕಳೆದು
ರವಿ ಉದಿಸಿದ ಮೂಡಣ..||
ಮೇಲೆ ಸಾಗುವ ಮಾರ್ಗ
ವಾಹನ ರೈಲಲಿ ತುಂಬಿ ಜನವರ್ಗ
ಬೆಸೆದಿದೆ ಗಟ್ಟಿ ಗೆಳೆತನ
ನನಸಾಗಿಸಿದೆ ಜನರ ಕನಸಿನ..||
ವಾಹನ ರೈಲಲಿ ತುಂಬಿ ಜನವರ್ಗ
ಬೆಸೆದಿದೆ ಗಟ್ಟಿ ಗೆಳೆತನ
ನನಸಾಗಿಸಿದೆ ಜನರ ಕನಸಿನ..||
ಆಶಾಗೋಪುರ ಕಟ್ಟಿ ದಾರಿದೀಪವಾಗಿದೆ
ದೀಪದಡಿ ಕತ್ತಲು ಮತ್ತೆ ಸಾಬೀತಾಗಿದೆ
ನೋವಿನಲು ನಲಿವಿನಲು ಜತೆ ನಡೆಯೆ ಗೆಳತಿ
ಹೆದರದೆ ಮುಂದಡಿಯಿಡಲು ಸುರಂಗದೊಳವಳೆ ಶಕುತಿ ..||
ದೀಪದಡಿ ಕತ್ತಲು ಮತ್ತೆ ಸಾಬೀತಾಗಿದೆ
ನೋವಿನಲು ನಲಿವಿನಲು ಜತೆ ನಡೆಯೆ ಗೆಳತಿ
ಹೆದರದೆ ಮುಂದಡಿಯಿಡಲು ಸುರಂಗದೊಳವಳೆ ಶಕುತಿ ..||
ಕತ್ತಲು ಬೆಳಕಿನ ಜೀವನ ಜಂಜಾಟ
ಒಮ್ಮೆ ಸುಂದರ ನೋಟ; ಮರುಕ್ಷಣ ತೊಳಲಾಟ
ಚಂದಿರನ ತಂಪೀಗ ಅನುಭವ
ಕಾದಿಹುದು ರವಿಯ ಪ್ರಖರ ಪ್ರಭಾವ..||
ಒಮ್ಮೆ ಸುಂದರ ನೋಟ; ಮರುಕ್ಷಣ ತೊಳಲಾಟ
ಚಂದಿರನ ತಂಪೀಗ ಅನುಭವ
ಕಾದಿಹುದು ರವಿಯ ಪ್ರಖರ ಪ್ರಭಾವ..||
ಇಂದು ಕಂಡ ಕನಸ ಬತ್ತಿ
ನಾಳೆ ಉರಿಯಲೂ ಬಹುದು ಹೊತ್ತಿ
ದಾಟಬಹುದು ಸುಲಭದಲಿ ಸುರಂಗ
ಕಳೆಯಬಹುದೇ ಹಣ್ಣೆಲೆಯಂತೆ ಭವದ ಸಂಗ..||
ನಾಳೆ ಉರಿಯಲೂ ಬಹುದು ಹೊತ್ತಿ
ದಾಟಬಹುದು ಸುಲಭದಲಿ ಸುರಂಗ
ಕಳೆಯಬಹುದೇ ಹಣ್ಣೆಲೆಯಂತೆ ಭವದ ಸಂಗ..||
👭
✍️... ಅನಿತಾ ಜಿ.ಕೆ.ಭಟ್.
02-01-2020.
02-01-2020.
ಚಿತ್ರ:-ಹವಿಸವಿ ಕೃಪೆ
ನಿಜ.. ಜೀವನವೇ ಒಂದು ಪಯಣ ,👌🏻👌🏻
ReplyDeleteಥ್ಯಾಂಕ್ಯೂ 💐
Deleteಧನ್ಯವಾದಗಳು 💐
ReplyDelete