Monday, 20 April 2020

ಮಾವಿನ ಹಣ್ಣಿನ ರಸಾಯನ 😋😋😋😋😋😋😋😋

ಮಾವಿನ ಹಣ್ಣಿನ ರಸಾಯನ



        ಬೇಸಗೆ ಅಂದರೆ ಹಣ್ಣುಗಳ ಸುಗ್ಗಿಕಾಲ...ಅದರಲ್ಲೂ ಹಣ್ಣುಗಳ ರಾಜ ಮಾವಿನ ಹಣ್ಣು ಯಥೇಚ್ಛವಾಗಿ ದೊರಕುವ ಸಮಯ.ಒಮ್ಮೆಯಾದರೂ ಮಾವಿನ ಹಣ್ಣಿನ ರಸಾಯನ ಮಾಡದಿದ್ದರೆ ಹೇಗೆ..? ಅಲ್ವಾ.. ಆಯಾಯ ಋತುವಿನಲ್ಲಿ ದೊರಕುವ ಆಹಾರ ಪದಾರ್ಥಗಳನ್ನು ,ಹಣ್ಣುಹಂಪಲುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.
ಮಾವಿನ ಹಣ್ಣಿನ ರಸಾಯನ ಬಹಳ ಸರಳವಾಗಿ ಮಾಡಬಹುದು.

ಬೇಕಾಗುವ ಪದಾರ್ಥಗಳು..

*ಎರಡು ಕಪ್ ಮಾವಿನ ಹಣ್ಣಿನ ಚಿಕ್ಕ ಹೋಳುಗಳು
*ಒಂದು ಕಪ್ ಬೆಲ್ಲ
*ತೆಂಗಿನಕಾಯಿ ತುರಿ ಎರಡು ಕಪ್
*ಏಲಕ್ಕಿ
*ಎಳ್ಳು (ಬೇಕಾದಲ್ಲಿ)

ಮಾಡುವ ವಿಧಾನ...

       ಮಾವಿನ ಹಣ್ಣಿನ ತುಂಡಿಗೆ ಬೆಲ್ಲ ಬೆರೆಸಿಡಿ.ಮಿಕ್ಸಿ ಗೆ ತೆಂಗಿನ ತುರಿ,ಏಲಕ್ಕಿ ಹಾಕಿ ನೀರು ಸ್ವಲ್ಪ ಸೇರಿಸಿ ನುಣ್ಣಗೆ ರುಬ್ಬಿ.ಬಟ್ಟೆಯಲ್ಲಿ ಸೋಸಿ.ದಪ್ಪ ತೆಂಗಿನಕಾಯಿ ಹಾಲು ತೆಗೆದಿಡಿ.ಮತ್ತೊಮ್ಮೆ ನೀರು ಬೆರೆಸಿ ಹಾಲು ಹಿಂಡಿ.ದಪ್ಪ ಹಾಲನ್ನು ಸೇರಿಸಿ.ರಸಾಯನದ ಪಾಕದ ಅಂದಾಜು ನೋಡಿ ಬೇಕಾದರೆ ಎರಡನೇ ಸಲ ಹಿಂಡಿದ ಕಾಯಿಹಾಲು ಹಾಕಿ . ಎಳ್ಳನ್ನು ಪಟಪಟ ಸಿಡಿಸಿ ಮೇಲೆ ಹಾಕಿ.ಕೆಲವರು ಇದನ್ನು ಇಷ್ಟಪಡಲ್ಲ.ಹಾಕದಿದ್ದರೂ ಆಗುತ್ತದೆ.ನಾನು ಹಾಕಿಲ್ಲ.ಬೆಲ್ಲ ಕರಗಿದಾಗ ಹಾಗೆಯೇ  ತಿನ್ನಲು ಕೊಡಬಹುದು.ಅಥವಾ ಫ್ರಿಡ್ಜ್ ನಲ್ಲಿ ಇಟ್ಟು ತಂಪಾದ ನಂತರವೂ ಸರ್ವ್ ಮಾಡಬಹುದು..


      ಕಲರ್ ಫುಲ್ ರಸಾಯನ ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ.ಇದನ್ನು ತೆಳ್ಳವು (ನೀರ್ದೋಸೆ), ಉದ್ದಿನ ದೋಸೆ , ಇಡ್ಲಿಯ ಜೊತೆಗೆ ಕೂಡಾ ತಿನ್ನಬಹುದು.


✍️... ಅನಿತಾ ಜಿ.ಕೆ.ಭಟ್.
21-04-2020.

2 comments:

  1. ರುಚಿಯಾದ ರಸಾಯನ 👌👌

    ReplyDelete
  2. ಹೌದು..ಈಗ ಹೆಚ್ಚಾಗಿ ಮಾಡುವ ರಸಾಯನ.. ಥ್ಯಾಂಕ್ಯೂ 💐🙏

    ReplyDelete