ಮಾವಿನ ಹಣ್ಣಿನ ಪಾಯಸ
ಹುಳಿ ಸಿಹಿ ರುಚಿಯಿರುವ ಕಾಟು ಮಾವಿನ ಹಣ್ಣಿನ ಪಾಯಸ ಮಾಡಿದರೆ ಹೇಗೆ ಎಂದು ಆಲೋಚನೆ ಬಂದಿದ್ದೇ ತಡ ಮಾಡೇಬಿಡೋಣ ಎಂದು ಆರಂಭಿಸಿದೆ..ಪಾಯಸ ಬಲು ರುಚಿಯಾಗಿತ್ತು.ಹೇಗೆ ಮಾಡಿದೆ ಅಂತ ನೀವೂ ನೋಡ್ಕೊಳ್ಳಿ..
ಬೇಕಾಗುವ ಸಾಮಗ್ರಿಗಳು:-
ಎಂಟು ಕಾಟುಮಾವಿನ ಹಣ್ಣು
ಎರಡು ಕಪ್ ಹಸಿತೆಂಗಿನಕಾಯಿ ತುರಿ
ಎರಡು ಕಪ್ ಬೆಲ್ಲ
ಏಲಕ್ಕಿ
ಎರಡು ಚಮಚ ಅಕ್ಕಿಹಿಟ್ಟು
ಮಾಡುವ ವಿಧಾನ :-
ಮೊದಲು ಮಾವಿನ ಹಣ್ಣನ್ನು ತೊಳೆದು ಸಿಪ್ಪೆ ತೆಗೆದು ಕಿವುಚಿಕೊಳ್ಳಿ. ತಿರುಳು ಗಟ್ಟಿಯಾಗಿದ್ದರೆ ಎರಡೂ ಬದಿ ತುಂಡುಮಾಡಿ ಮಿಕ್ಸಿಯಲ್ಲಿ ರುಬ್ಬಿ ಹಾಕಿ.ತೆಂಗಿನತುರಿಯನ್ನು ನುಣ್ಣಗೆ ರುಬ್ಬಿ ದಪ್ಪ ಹಾಲು ಸೋಸಿಟ್ಟುಕೊಳ್ಳಿ.ಎರಡನೇ ಸಲದ ಹಾಲಿನಲ್ಲಿ ಮಾವಿನ ಹಣ್ಣನ ಮಿಶ್ರಣವನ್ನು ಬೇಯಿಸಿಕೊಳ್ಳಿ..ಬೆಲ್ಲ ಹಾಕಿ.ಬೆಲ್ಲ ಕರಗಿದಾಗ ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ತಿರುವಿ.ಕುದಿಯಲು ಆರಂಭವಾದಾಗ ದಪ್ಪ ಕಾಯಿಹಾಲು ಸೇರಿಸಿ. ಪಾಯಸ ಕುದಿಯುತ್ತಿದ್ದಂತೆ ಸ್ಟವ್ ಆರಿಸಿ ಏಲಕ್ಕಿ ಪುಡಿ ಬೆರೆಸಿ.. ಬಿಸಿ ಬಿಸಿ ಮಾವಿನ ಹಣ್ಣಿನ ಪಾಯಸ ಮನೆಮಂದಿಯೊಂದಿಗೆ ಸವಿಯಿರಿ..
✍️... ಅನಿತಾ ಜಿ.ಕೆ.ಭಟ್.
27-04-2020.

ರುಚಿಯಾದ ಪಾಯಸ....
ReplyDeleteಥ್ಯಾಂಕ್ಯೂ 💐🙏
ReplyDelete