Thursday, 12 March 2020

ನಗುವಾ ಗುಲಾಬಿ ಹೂವೇ...ನೀ ಮನಸೆಳೆವೆ..








ನಸುನಗುವ ಹೂವಿನ
ಮುಗ್ಧ ಭಾವ
ತುಸುಬಾಗಿ ವಾಲುತಿದೆ
ತಂಗಾಳಿ ಸೋಕಿ..

ನವಿರಾದ ಎಸಳುಗಳು
ರಂಗಾಗಿ ನಕ್ಕು
ಸೆಳೆದ ದುಂಬಿಗಳ
ಸರಸಕೆ ಸಿಕ್ಕಿ...


ಕೆಂಪೇರಿ ನಾಚಿದೆ
ಒಲವ ಸುಧೆಹರಿಸಿ
ಬಿಸಿಲಧಗೆ ಸುಟ್ಟರೂ
ಹನಿ ತಂಪನೆನೆಸಿ...

✍️... ಅನಿತಾ ಜಿ.ಕೆ.ಭಟ್.
12-03-2020.


No comments:

Post a Comment