Tuesday, 4 February 2020

ಅಮ್ಮನ ಪ್ರೀತಿಯ ಬುತ್ತಿ



ಅಮ್ಮಾ.......ನಂಗೆ ರೆಡಿ
ಮಾಡಿದ್ಯಾ ಲಂಚ್ ಬಾಕ್ಸೂ...
ಹೆಚ್ಚೇನ್ ಬೇಡ ಇರ್ಲಿ
ಎರಡು ಚಪಾತಿ ಸಾಸೂ...||

ಗೆಳೆಯರೆಲ್ಲ ದಿನಾ ತರೋದು
ಬ್ರೆಡ್ ಜಾಮ್ ಸ್ಯಾಂಡ್ ವಿಚ್ಚು...
ನೀನು ರೊಟ್ಟಿ ತಟ್ಟಿ ಕೊಟ್ರೆ
ಆಹಾ...ಎಲ್ರಿಗೂ ಅಚ್ಚುಮೆಚ್ಚು...||

ಅನ್ನ ಸಾರು ಪಲ್ಯ
ಜೊತೆಗೆ ಹಪ್ಳ ಹಾಕು...
ಇನ್ನೊಂದು ಬಾಕ್ಸಲ್ಲಿ
ಬಿಸ್ಕಿಟ್ ಇರ್ಲಿ ನಾಲ್ಕೇ ನಾಲ್ಕು...||

ತಿಂತೀನಿ ನಾನು ಚೂರೂ
ಬಿಡದೆ ತರಕಾರಿ ಪೀಸು...
ಅದ್ಕೇ ಅಲ್ವೇ ಗಟ್ಟಿಮುಟ್ಟು
ಈ ನಿನ್ನ ಪುಟ್ಟ ಕೂಸು...||

ಬುತ್ತೀಲಿ ತಿಂಡಿ ಏನೇ ಇರ್ಲಿ
ಅದೆಲ್ಲ ನಿನ್ನ ಪ್ರೀತಿ...
ಅಮ್ಮನ ಅಡುಗೆ ಉಂಡ
ನಂಗೆ ಇಲ್ಲ ರೋಗಭೀತಿ...||


✍️... ಅನಿತಾ ಜಿ.ಕೆ.ಭಟ್.
05-02-2020.

Momspresso Kannada ದಲ್ಲಿ ಕೊಟ್ಟ ಚಿತ್ರಕ್ಕೆ ಬರೆದ ಕವನ.



ನಮಸ್ತೇ...

       ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ  ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..


 ಹಾಗೇನೇ ... > ಈ  ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...

     share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..

      ಬರಹದ ಮೇಲ್ಗಡೆ ಬ್ಲಾಗ್ ಲಿಂಕ್ ಕಾಣುವಲ್ಲಿ ಪಕ್ಕದಲ್ಲಿ ಮೂರು ಡಾಟ್ ಮತ್ತು ಲೈನ್ಸ್ ಕಾಣಿಸುತ್ತದೆ.. ಅದನ್ನು ಕ್ಲಿಕ್ ಮಾಡಿ.. ಶೇರ್ ಆಪ್ಷನ್ ಸೆಲೆಕ್ಟ್ ಮಾಡಿ...ನಂತರ ನೀವು ಫೇಸ್ಬುಕ್, ವಾಟ್ಸಪ್,ಮೆಸೇಂಜರ್, ಮೈಲ್..ಹೀಗೇ ಹಲವಾರು ಸೋಶಿಯಲ್ ಆಪ್..ಗಳನ್ನು ಬಳಸಿ ನಿಮಗಿಷ್ಟವಾದ ಬರಹವನ್ನು ಶೇರ್ ಮಾಡಬಹುದು..

ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.



2 comments:

  1. ನಿಜ... ಚೆನ್ನಾಗಿದೆ

    ReplyDelete
  2. ಹೌದಲ್ವಾ... ಧನ್ಯವಾದಗಳು 💐🙏

    ReplyDelete