ಚೈತ್ರ ತಂದ ಚಿಗುರಿನ ಹಾಗೆ ನಿನ್ನ ಸ್ನೇಹವು ಗೆಳೆಯ
ಬರದ ಛಾಯೆಗೆ ನಲುಗಿದ
ಬೆಂಗಾಡು ನಾನು
ಸೋನೆ ಮಳೆಯಂತೆ ಸೋಕಿ
ತಂಪೆರೆದೆ ನೀನು...||
ಹನಿಹನಿಗಳ ಲೀಲೆಗೆ
ಕೊರಡು ಕೊನರಿದೆ
ಇನಿಯನಿನ್ನ ಪರಿಧಿಯೊಳಗೆ
ತರತರದ ಸೊಗವಿದೆ...||
ಇದಿರು ನೋಡುತಲಿದ್ದೆ
ಮುದ್ದಿಸುವ ಕರಗಳನು
ಸದ್ದಿರದೆ ಆಗಮಿಸಿದೆ
ಹದ್ದುಮೀರದ ಜಾಣನು...||
ಪ್ರೇಮ ನೋಟಕೆ ಸೋತು
ಕದಿರೊಡೆದ ಒಲವು
ನೇಮನಿಷ್ಠೆಯ ಮರೆತು
ನಡೆಯದಿರೆ ಗೆಲುವು...||
ಚೈತ್ರತಂದ ಚಿಗುರಿನ ಹಾಗೆ
ನಿನ್ನ ಸ್ನೇಹವು ಗೆಳೆಯ
ಛತ್ರಿಯ ಪ್ರತಿಕೊನೆಗೂ
ನನ್ನ ಮೋಹವು ಒಡ್ಡಿಕೈಯ...||
ಒಂಟಿಯ ಪಯಣದಲಿ
ಪಂಚಮದ ಇಂಚರ
ಜಂಟಿಯಾಗಿ ಸಾಗುತಲಿ
ನಮ್ಮ ಪ್ರೆಮವು ಅಮರ...||
ಮಾಮರದ ತುಂಬ ಕುಕಿಲ
ಚಿಗುರ ಮೆದ್ದು
ಇಂಪಾದ ಗಾನದಲಿ ಪ್ರೇಮ
ಲಹರಿ ಸದ್ದು...||
ನಿನ್ನೊಂದು ನಗೆಯಲ್ಲಿ
ನನ್ನ ಹಿಡಿದಿಡುವೆಯ ಗೆಳೆಯ
ನನ್ನೊಂದು ಸೆರಗಲ್ಲಿ
ನಿನ್ನ ಬೆಚ್ಚಗಿರಿಸುವೆ ಇನಿಯ...||
✍️... ಅನಿತಾ ಜಿ.ಕೆ.ಭಟ್.
15-03-2020.
ಚಿತ್ರ ಮತ್ತು ಶೀರ್ಷಿಕೆ ಕೃಪೆ:-ಕೊಡಗಿನ ಬೆಳದಿಂಗಳು ಫೇಸ್ಬುಕ್ ಗ್ರೂಪ್.
ಬರದ ಛಾಯೆಗೆ ನಲುಗಿದ
ಬೆಂಗಾಡು ನಾನು
ಸೋನೆ ಮಳೆಯಂತೆ ಸೋಕಿ
ತಂಪೆರೆದೆ ನೀನು...||
ಹನಿಹನಿಗಳ ಲೀಲೆಗೆ
ಕೊರಡು ಕೊನರಿದೆ
ಇನಿಯನಿನ್ನ ಪರಿಧಿಯೊಳಗೆ
ತರತರದ ಸೊಗವಿದೆ...||
ಇದಿರು ನೋಡುತಲಿದ್ದೆ
ಮುದ್ದಿಸುವ ಕರಗಳನು
ಸದ್ದಿರದೆ ಆಗಮಿಸಿದೆ
ಹದ್ದುಮೀರದ ಜಾಣನು...||
ಪ್ರೇಮ ನೋಟಕೆ ಸೋತು
ಕದಿರೊಡೆದ ಒಲವು
ನೇಮನಿಷ್ಠೆಯ ಮರೆತು
ನಡೆಯದಿರೆ ಗೆಲುವು...||
ಚೈತ್ರತಂದ ಚಿಗುರಿನ ಹಾಗೆ
ನಿನ್ನ ಸ್ನೇಹವು ಗೆಳೆಯ
ಛತ್ರಿಯ ಪ್ರತಿಕೊನೆಗೂ
ನನ್ನ ಮೋಹವು ಒಡ್ಡಿಕೈಯ...||
ಒಂಟಿಯ ಪಯಣದಲಿ
ಪಂಚಮದ ಇಂಚರ
ಜಂಟಿಯಾಗಿ ಸಾಗುತಲಿ
ನಮ್ಮ ಪ್ರೆಮವು ಅಮರ...||
ಮಾಮರದ ತುಂಬ ಕುಕಿಲ
ಚಿಗುರ ಮೆದ್ದು
ಇಂಪಾದ ಗಾನದಲಿ ಪ್ರೇಮ
ಲಹರಿ ಸದ್ದು...||
ನಿನ್ನೊಂದು ನಗೆಯಲ್ಲಿ
ನನ್ನ ಹಿಡಿದಿಡುವೆಯ ಗೆಳೆಯ
ನನ್ನೊಂದು ಸೆರಗಲ್ಲಿ
ನಿನ್ನ ಬೆಚ್ಚಗಿರಿಸುವೆ ಇನಿಯ...||
✍️... ಅನಿತಾ ಜಿ.ಕೆ.ಭಟ್.
15-03-2020.
ಚಿತ್ರ ಮತ್ತು ಶೀರ್ಷಿಕೆ ಕೃಪೆ:-ಕೊಡಗಿನ ಬೆಳದಿಂಗಳು ಫೇಸ್ಬುಕ್ ಗ್ರೂಪ್.
ಸುಂದರ ಕವನ
ReplyDeleteಥ್ಯಾಂಕ್ಯೂ 💐🙏
ReplyDeleteಇಷ್ಟ ಆಯ್ತು..ಚಂದದ ಕವನ..
ReplyDelete