ನಾನು ನರಳುತಿದ್ದರೂ ಜೀವವೊಂದನ್ನು
ಅರಳಿಸಬಲ್ಲೆ
ನನ್ನ ಬಾಳು ಕತ್ತಲೆಯಲ್ಲಿದ್ದರೂ ಇತರರ ಬಾಳಿಗೆ ಬೆಳಕಾಗಬಲ್ಲೆ
ನನ್ನ ಹೃದಯದ ತುಂಬಾ ನೋವಿದ್ದರೂ ಮಂದಹಾಸವ ಬೀರಬಲ್ಲೆ
ನಾನು ಕಂಡ ಕನಸುಗಳೆಲ್ಲ ಛಿದ್ರವಾದರೂ ಇತರರ ಕನಸಿಗೆ ನೀರೆರೆದು ಪೋಷಿಸಬಲ್ಲೆ....
ನಾನು ನೋವನ್ನೇ ನುಂಗಿ ಸಹಿಸಿ ಇತರರಿಗೆ ತಂಪೀವ ನೆರಳಾಗಬಲ್ಲೆ
ಮುಳ್ಳಿನ ಬೇಲಿಯೊಳಗೆ ಬಂಧಿಯಾದರೂ ಎಲ್ಲರ ಹಿತವನ್ನೇ ಬಯಸಬಲ್ಲೆ
ಲೋಕದ ಕಣ್ಣಿಗೆ ಬಲಹೀನಳಂತೆ ಕಂಡರೂ ನಾನಲ್ಲ ಅಬಲೆ
ನಾನು ಶಕ್ತಿಯುಕ್ತಿಯಲಿ ಜಯಿಸಿ ತೋರಿಸುವೆ ನಾನಹುದು ಸಮಬಲೆ..
✍️... ಅನಿತಾ ಜಿ.ಕೆ.ಭಟ್.
08-03-2020.
ವಿಶ್ವ ಮಹಿಳಾ ದಿನಕ್ಕಾಗಿ momspresso Kannada ದಲ್ಲಿ ಪ್ರಕಟಿಸಿದ ಕವನ..
ಅಬಲೆಯಲ್ಲ ಸಮಬಲೆ... ಓದಿ ಖುಷಿ ಆಯ್ತು
ReplyDeleteಥ್ಯಾಂಕ್ಯೂ 💐🙏
ReplyDelete