ಹಾಳುಕೊಂಪೆ ಊರಿನಲ್ಲಿ
ಪಾಳುಬಿದ್ದ ಗುಡಿಸಲಲ್ಲಿ
ಕೀಳುಮೇಲು ಭೇದವಿರದೆ
ಬಾಳುತಿದ್ದ ಚಿಣ್ಣರು...||೧||
ಹಳೆಯ ಚಕ್ರ ಹುಡುಕಿ ತಂದು
ಎಳೆಯ ಬಿದಿರ ಕೋಲಕಟ್ಟಿ
ಬಳ್ಳಿಯೊಂದ ಬಿಗಿದು ಬಿಟ್ಟು
ಎಳೆದ ಎಳೆಯ ಬಾಲರು...||೨||
ಊರಬೀದಿ ತಿರುವು ತಿರುವಿನಲ್ಲಿ
ಬರಿಯ ಪಾದ ಮೆಟ್ಟಿ ನಡೆದು
ಭಾರಿ ಮೋಜು ಮಸ್ತಿ ಮಾಡಿ
ದರದರನೆ ಎಳೆದರು...||೩||
ತಾತನವನು ಮಕ್ಕಳೊಡನೆ
ಪ್ರೀತಿಯಿಂದ ಗೆಳೆಯನಾಗಿ
ಬಿತ್ತಿ ಸರದಿಯೆಂಬ ಶಿಸ್ತು
ಕಿತ್ತಜೋಡ ಹಾಕಿನಡೆದನು||೪||
ಬೆಲೆಬಾಳುವ ಆಟಿಕೆಗಳಿಲ್ಲ
ಕೀಲಿಬೊಂಬೆ ಕಂಡೇಯಿಲ್ಲ
ಜಾಲಿಯಾಗಿ ಎಳೆವಬಂಡಿ
ತೇಲಿ ಸಂತಸದ ಕಡಲಿನಲ್ಲಿ||೫||
ಬಾಳಿನಲ್ಲಿ ಸುಖವು ಎಂದೂ
ಕೇಳಿಕೊಂಡು ಬರುವುದುಂಟೆ?
ಕಳೆದುಹೋದ ಕೊರಗುಯೇಕೆ?
ನಾಳೆಯ ಚಿಂತೆ ಅತಿಯೇಕೆ..?||೬||
ನಾಲ್ಕು ದಿನದ ಬದುಕಯಾನ
ಬೇಕು ತೃಪ್ತಿ ಸಮಾಧಾನ
ಕೇಕೆಹಾಕಿ ನಗುತ ಸಾಗುವ
ನಕ್ಕು ನಲಿದು ಗೆದ್ದು ಬೀಗುವ...||೭||
✍️... ಅನಿತಾ ಜಿ.ಕೆ.ಭಟ್.
13-02-2020.
ಚಿತ್ರ ಕೃಪೆ-ಕನ್ನಡ ಕಥಾಗುಚ್ಛ.
👏👏
ReplyDelete💐🙏
ReplyDeleteಚೆನ್ನಾಗಿದೆ
ReplyDeleteಚೆನ್ನಾಗಿದೆ
ReplyDelete