ಬೆಳೀಬೇಕು ನೋಡಿ ನನ್ಹಂಗೇ
ಕಡ್ದೋರೂ ಕಣ್ಣೆತ್ತಿ ನೋಡೋಹಾಂಗೆ...
ಛಲದಿಂದಲೇ ಮೇಲೇರ್ಬೇಕು ನನ್ಹಂಗೇ
ಬಲವಾಗಿ ಬೇರೂರ್ಬೇಕು ಕೀಳದ್ಹಾಂಗೇ...
ಗಿಣಿ ಹಸಿರಿಂದ ಕಂಗೊಳಿಸ್ತೀನಿ ನಾನು
ಸೊಪ್ಪು ಜಜ್ಜಿಸ್ಕೊಂಡ್ರೂ ರಂಗಾಗೋನು ನಾನು..
ಮದುವೆ ಮನೇಲಿ ಮೊದಲು ಬರೋದು ನಾನು
ಮದುಮಗಳ ಕೈಯಲ್ಲಿ ನಲಿಯೋದು ನಾನು...
ಕಡಿಯದಿರಿ,ನನ್ನಲ್ಲೂ ಇವೆ ನೂರಾರು ಆಸೆ
ಬಳಸಿಬಿಸುಟುವ ಮಾನವನೇ ನಿನಗೆಷ್ಟು ದುರಾಸೆ..
✍️... ಅನಿತಾ ಜಿ.ಕೆ.ಭಟ್.
13-11-2019.
ಕಡ್ದೋರೂ ಕಣ್ಣೆತ್ತಿ ನೋಡೋಹಾಂಗೆ...
ಛಲದಿಂದಲೇ ಮೇಲೇರ್ಬೇಕು ನನ್ಹಂಗೇ
ಬಲವಾಗಿ ಬೇರೂರ್ಬೇಕು ಕೀಳದ್ಹಾಂಗೇ...
ಗಿಣಿ ಹಸಿರಿಂದ ಕಂಗೊಳಿಸ್ತೀನಿ ನಾನು
ಸೊಪ್ಪು ಜಜ್ಜಿಸ್ಕೊಂಡ್ರೂ ರಂಗಾಗೋನು ನಾನು..
ಮದುವೆ ಮನೇಲಿ ಮೊದಲು ಬರೋದು ನಾನು
ಮದುಮಗಳ ಕೈಯಲ್ಲಿ ನಲಿಯೋದು ನಾನು...
ಕಡಿಯದಿರಿ,ನನ್ನಲ್ಲೂ ಇವೆ ನೂರಾರು ಆಸೆ
ಬಳಸಿಬಿಸುಟುವ ಮಾನವನೇ ನಿನಗೆಷ್ಟು ದುರಾಸೆ..
✍️... ಅನಿತಾ ಜಿ.ಕೆ.ಭಟ್.
13-11-2019.
No comments:
Post a Comment