ತಾಜಾ ತಾಜಾ ಸಂಜೆ ಮಲ್ಲಿಗೆ
ಬಂದಿಹಳು ಮಲ್ಲೆ ನಿಮ್ಮಲ್ಲಿಗೆ
ರವಿಯ ಕಾಣುತಲೆ ತಲೆಯ ತಗ್ಗಿಸಿ
ಶಶಿಯ ಸೊಬಗಿಗೆ ಮೊಗ್ಗನರಳಿಸಿ
ಸಿಕ್ಕ ಜಾಗದಲಿ ತೃಪ್ತಿಯಿಂದಲಿ
ಬದುಕುತಿರುವುದು ಹೂವಲೀಲೆ....
ನೀರು ಬೇಡದು ಆಹಾರ ಬಯಸದು
ಮನುಜನಂತೆ ಮಲಿನಗೈಯದು
ಇರುವ ತಾಸಲಿ ದುಂಬಿಗಳಿಗುಣಿಸಿ
ತೆರೆಗೆ ಸರಿವುದು ದೇಹಗೊಬ್ಬರವಾಗಿಸಿ
ಮಾಲೆ ಹೆಣೆದರೆ ದೇವನ ಮುಡಿಯೊಳು
ಇಲ್ಲಾ ಧನ್ಯವಾಗುವೆ ಧರೆಯ ಮಡಿಲೊಳು ....
✍️... ಅನಿತಾ ಜಿ.ಕೆ.ಭಟ್.
13-11-2019.
ಬಂದಿಹಳು ಮಲ್ಲೆ ನಿಮ್ಮಲ್ಲಿಗೆ
ರವಿಯ ಕಾಣುತಲೆ ತಲೆಯ ತಗ್ಗಿಸಿ
ಶಶಿಯ ಸೊಬಗಿಗೆ ಮೊಗ್ಗನರಳಿಸಿ
ಸಿಕ್ಕ ಜಾಗದಲಿ ತೃಪ್ತಿಯಿಂದಲಿ
ಬದುಕುತಿರುವುದು ಹೂವಲೀಲೆ....
ನೀರು ಬೇಡದು ಆಹಾರ ಬಯಸದು
ಮನುಜನಂತೆ ಮಲಿನಗೈಯದು
ಇರುವ ತಾಸಲಿ ದುಂಬಿಗಳಿಗುಣಿಸಿ
ತೆರೆಗೆ ಸರಿವುದು ದೇಹಗೊಬ್ಬರವಾಗಿಸಿ
ಮಾಲೆ ಹೆಣೆದರೆ ದೇವನ ಮುಡಿಯೊಳು
ಇಲ್ಲಾ ಧನ್ಯವಾಗುವೆ ಧರೆಯ ಮಡಿಲೊಳು ....
✍️... ಅನಿತಾ ಜಿ.ಕೆ.ಭಟ್.
13-11-2019.
No comments:
Post a Comment