ಮುಳ್ಳುಸೌತೆ-ಕಡಲೆಬೇಳೆ ಪಾಯಸ
ಮುಳ್ಳುಸೌತೆ ಪಾಯಸಕ್ಕೆ ಹೆಸರು ಅಥವಾ ಕಡಲೆಬೇಳೆಯ ಕಾಂಬಿನೇಷನ್ ಚೆನ್ನಾಗಿರುತ್ತದೆ.ಕರಾವಳಿಯಲ್ಲಿ ಬೆಳೆಯುವ ಮುಳ್ಳುಸೌತೆಯು ಪಾಯಸಕ್ಕೆ ಸೂಕ್ತವಾದುದು.
ಬೇಕಾದ ಸಾಮಗ್ರಿಗಳು:-
ಮುಳ್ಳುಸೌತೆ ತುಂಡುಗಳು ಒಂದು ಕಪ್, ಒಂದು ಕಪ್ ಕಡಲೆಬೇಳೆ, ಎರಡು ಕಪ್ ತೆಂಗಿನಕಾಯಿ ಗಟ್ಟಿ ಹಾಲು, ಏಲಕ್ಕಿ ಎರಡು ಕಪ್ ಬೆಲ್ಲ.
ಮಾಡುವ ವಿಧಾನ:-
ಕಡಲೆಬೇಳೆಯನ್ನು ಕುಕ್ಕರಿನಲ್ಲಿ ಮೂರು ಸೀಟಿ ಕೂಗಿಸಿ.ಮುಳ್ಳುಸೌತೆಯನ್ನು ಬೇಯಿಸಿಕೊಳ್ಳಿ.ಎರಡನ್ನು ಜೊತೆ ಸೇರಿಸಿ ಬೆಲ್ಲ ಹಾಕಿಕುದಿಸಿ.ಕರಗಿದ ನಂತರ ಒಂದು ಚಮಚ ಅಕ್ಕಿ ಹಿಟ್ಟನ್ನು ನೀರು ಮಾಡಿ ಹಾಕಿ.ಅಕ್ಕಿಹಿಟ್ಟು ಬೆಂದ (ಎರಡು ರಿಂದ ನಾಲ್ಕು ನಿಮಿಷ ಸಾಕು) ನಂತರ ತೆಂಗಿನಕಾಯಿ ಹಾಲು ಸೇರಿಸಿ.ಮೇಲಿನಿಂ ಏಲಕ್ಕಿ ಪುಡಿ ಉದುರಿಸಿ.ಗೋಡಂಬಿ, ದ್ರಾಕ್ಷಿ ಬೇಕೆನಿಸಿದರೆ ಹಾಕಬಹುದು.ರುಚಿಕರವಾದ ಮುಳ್ಳುಸೌತೆ-ಕಡಲೆಬೇಳೆ ಪಾಯಸ ಸವಿಯಲು ಸಿದ್ಧ.
No comments:
Post a Comment