ಮಾವಿನಹಣ್ಣಿನ ಚಂಡ್ರುಳಿ
ಇದು ಬಹಳ ಹಿಂದಿನಿಂದಲೇ ಬಂದಂತಹ ಅಡುಗೆ.ಕಾಡುಮಾವಿನ ಹೆಣ್ಣು ತುಂಬಾ ಬೀಳುವಾಗ ಮಾಡುವಂತಹ ಪದಾರ್ಥ.
ಬೇಕಾಗುವ ಸಾಮಗ್ರಿಗಳು:-
ಕಾಡು ಮಾವಿನಹಣ್ಣು , ಉಪ್ಪು, ಬೆಲ್ಲ ಮೆಣಸಿನಪುಡಿ, ಒಗ್ಗರಣೆಯ ಸಾಮಗ್ರಿಗಳು.
ಮಾಡುವ ವಿಧಾನ:-
ಮಾವಿನಹಣ್ಣನ್ನು ತೊಳೆದು ಸಿಪ್ಪೆ ತೆಗೆದು ಗೊರಟಿನಿಂದ ರಸವನ್ನು ಹಿಂಡಿ ಕೊಳ್ಳುವುದು.ಗೊರಟು ಮತ್ತು ಸಿಪ್ಪೆಯನ್ನು ಒಮ್ಮೆ ಸ್ವಲ್ಪ ನೀರು ಹಾಕಿ ಕಿವುಚಿ.ಕಿವುಚಿದ ನೀರನ್ನು ಎಷ್ಟು ಬೇಕೋ ಅಷ್ಟು ಸೇರಿಸಿ.ಇದು ಸ್ವಲ್ಪ ಗಟ್ಟಿಯಾಗಿರಬೇಕು.ತುಂಬಾ ನೀರಾಗಿ ಮಾಡಿಕೊಳ್ಳುವುದಲ್ಲ.ನಂತರ ರುಚಿಗೆ ತಕ್ಕಷ್ಟು ಉಪ್ಪು ,ಬೆಲ್ಲ ,ಮೆಣಸಿನಪುಡಿ ಹಾಕಿ ಕುದಿಸಿ.ಖಾರಕ್ಕೆ ಬೇಕಾದರೆ ಹಸಿಮೆಣಸನ್ನು ಬಳಸಬಹುದು.ಇಂಗಿನ ಒಗ್ಗರಣೆ ನೀಡಿ.ಮಾವಿನಹಣ್ಣಿನ ಚಂಡ್ರುಳಿ ಸಿದ್ಧ.ಕುಚ್ಚಿಲಕ್ಕಿ ಗಂಜಿ ಜೊತೆಗೆ ಸೂಪರ್.. ದೋಸೆ ಚಪಾತಿಗೂ ಸೇರಿಸಿ ತಿನ್ನಬಹುದು..
No comments:
Post a Comment