ಮಾವಿನ ಹಣ್ಣಿನ ರಸಾಯನ
ಮಾವಿನಹಣ್ಣಿನ ತಿರುಳನ್ನು ತುಂಡುಗಳನ್ನಾಗಿ ಮಾಡಿ ರಸಾಯನ ತಯಾರಿಸುವುದು ಒಂದು ವಿಧಾನವಾದರೆ ,ಇದು ತಿರುಳನ್ನು ಕಡೆದು ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು:-
ಮಾವಿನ ಹಣ್ಣಿನ ರಸ ಎರಡು ಕಪ್,ಅರ್ಧ ಕಪ್ ಬೆಲ್ಲ ಅರ್ಧ ಕಪ್ ಸಕ್ಕರೆ,ಏಲಕ್ಕಿ ಪುಡಿ, ಎಳ್ಳು, ತೆಂಗಿನಕಾಯಿ ಹಾಲು ಎರಡು ಕಪ್, ಐಸ್ಕ್ರೀಮ್ ಮಿಕ್ಸ್ ಪೌಡರ್.
ಮಾಡುವ ವಿಧಾನ:-
ಮಾವಿನಹಣ್ಣನ್ನು ತೊಳೆದು ಸಿಪ್ಪೆ ತೆಗೆದು ತಿರುಳನ್ನು ತುಂಡು ಮಾಡಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.ಈ ಮಿಶ್ರಣಕ್ಕೆ ತೆಂಗಿನಕಾಯಿ ಹಾಲು ಮತ್ತು ಬೆಲ್ಲ ,ಸಕ್ಕರೆ ,ಏಲಕ್ಕಿ ಪುಡಿ ಸೇರಿಸಿ.ಸ್ವಲ್ಪ ಐಸ್ಕ್ರೀಮ್ ಮಿಕ್ಸ್ ಸೇರಿಸಿ.ಬೇಕಿದ್ದಲ್ಲಿ ಎಳ್ಳು ಸಿಡಿಸಿ ಹಾಕಬಹುದು..ಹಾಗೆಯೇ ಸರ್ವ್ ಮಾಡಬಹುದು ಅಥವಾ ಕೂಲ್ ಮಾಡಿ ಸರ್ವ್ ಮಾಡಿ.
No comments:
Post a Comment