Tuesday, 12 May 2020

ಚಿಕ್ಕು ಮಿಲ್ಕ್ ಶೇಕ್


           ಚಿಕ್ಕು/ಸಪೋಟ ಮಿಲ್ಕ್ ಶೇಕ್


        ಚಿಕ್ಕು ಹಣ್ಣಿನಲ್ಲಿ ವಿಟಮಿನ್ ಎ ,ವಿಟಮಿನ್ ಬಿ, ವಿಟಮಿನ್ ಸಿ ,ಕಬ್ಬಿಣ ಹಾಗೂ ಕ್ಯಾಲ್ಸಿಯಂ ಇರುತ್ತದೆ.ಚಿಕ್ಕು ಹಣ್ಣು ಸೇವನೆ ಆರೋಗ್ಯಕರ.. ಚಿಕ್ಕು ಮಿಲ್ಕ್ ಶೇಕ್, ಚಿಕ್ಕು ಐಸ್ ಕ್ರೀಂ ಮಕ್ಕಳ ಪಾಲಿಗಂತೂ ಬಹಳ ರುಚಿಯ ಪಾನಿಯ.


ಬೇಕಾಗುವ ಸಾಮಗ್ರಿಗಳು:-


4 ಚಿಕ್ಕು
ಒಂದುವರೆ ಕಪ್ ಹಾಲು
2 ಸ್ಪೂನ್ ಸಕ್ಕರೆ


ಮಾಡುವ ವಿಧಾನ:-


ಚಿಕ್ಕು ಹಣ್ಣುಗಳನ್ನು ತೊಳೆದುಕೊಂಡು  ಕತ್ತರಿಸಿ ಬೀಜ , ಸಿಪ್ಪೆಯನ್ನು ತೆಗೆಯಬೇಕು.ಮಿಕ್ಸಿ ಜಾರಿನಲ್ಲಿ ಚಿಕ್ಕು, ಸಕ್ಕರೆ, ಹಾಲನ್ನು ಹಾಕಿ ರುಬ್ಬಿ. ನಂತರ ಗ್ಲಾಸ್ ಗೆ ಹಾಕಿ ಸರ್ವ್ ಮಾಡಿ.. ಮಕ್ಕಳು ಬಹಳ ಇಷ್ಟಪಡುತ್ತಾರೆ. ಇದೇ ಮಿಶ್ರಣಕ್ಕೆ ಐಸ್ ಕ್ರೀಮ್ ಪೌಡರ್  ಸೇರಿಸಿ ಚಿಕ್ಕು ಐಸ್ಕ್ರೀಮ್ ಮಾಡಬಹುದು..


✍️... ಅನಿತಾ ಜಿ.ಕೆ.ಭಟ್.
12-05-2020.



No comments:

Post a Comment