ತಾಯ ಮಡಿಲು
ಜೀವದಣುವಿಗೆ ಕಣವು ಸೇರಿ
ಒಡಲ ಉಡಿಯಲಿ ತುಂಬಿದೆ
ಉಸಿರನೀಡಿ ಒಲವ ರೂಪ
ಎರಕಹೊಯ್ದ ಮಾತೆಯೇ ||
ಒಡಲ ಉಡಿಯಲಿ ತುಂಬಿದೆ
ಉಸಿರನೀಡಿ ಒಲವ ರೂಪ
ಎರಕಹೊಯ್ದ ಮಾತೆಯೇ ||
ಎನಗೆ ಜಗವು ನಿನ್ನ ಗರ್ಭವು
ಭದ್ರಕೋಟೆಯೊಳಗಿಲ್ಲ ಆರ ಭಯವು||
ಭದ್ರಕೋಟೆಯೊಳಗಿಲ್ಲ ಆರ ಭಯವು||
ತಾಯ ಮೆಲುದನಿ ತಂದೆಯ ಮಂತ್ರ
ಘೋಷವು ತುಂಬಿ ನನ್ನ ಕರ್ಣವ
ತಾಯ ಗೆಜ್ಜೆಯ ಬಳೆಯ ಸದ್ದು
ತೂರಿ ಬಂದಿದೆ ಉದರವ||
ಘೋಷವು ತುಂಬಿ ನನ್ನ ಕರ್ಣವ
ತಾಯ ಗೆಜ್ಜೆಯ ಬಳೆಯ ಸದ್ದು
ತೂರಿ ಬಂದಿದೆ ಉದರವ||
ಮಡಿಲು ತುಂಬುವ ಶಾಸ್ತ್ರವೇ ಸೀಮಂತ
ತಾಯ್ಮನದ ಹಾರೈಕೆ ನನ ಕಂದ ಧೀಮಂತ||
ತಾಯ್ಮನದ ಹಾರೈಕೆ ನನ ಕಂದ ಧೀಮಂತ||
ತುಂಬು ಗರ್ಭದಿ ಬಿಗಿಯಾಗಿದೆ ಅಬ್ಬೆಯುಸಿರು
ನಾಭಿಯಲ್ಲುಂಬ ಬಾಬೆಯ ಕಾಲೊದೆತ ಜೋರು
ತುಂಟನ ತೊಟ್ಟಿಲ ತೂಗಿ ಜೋಗುಳ ಹಾಡಿ ಮುದ್ದಿಸುತ ಮೈಮರೆವ ಕನಸು ಒಸರು||
ನಾಭಿಯಲ್ಲುಂಬ ಬಾಬೆಯ ಕಾಲೊದೆತ ಜೋರು
ತುಂಟನ ತೊಟ್ಟಿಲ ತೂಗಿ ಜೋಗುಳ ಹಾಡಿ ಮುದ್ದಿಸುತ ಮೈಮರೆವ ಕನಸು ಒಸರು||
ನವಮಾಸ ನವದಿನದಿ ನವಯುಗ ಬಂದಂತೆ
ನಾ ಬಂದಿಳಿದೆ ಈ ಭುವಿಗೆ
ಚೀರುತಲಿ ಹಂಬಲಿಸಿದೆ ತಾಯ ಮಡಿಲಿಗೆ
ನೋವ ನುಂಗಿ ನವಿರಾಗಿ ಮುತ್ತಿಡುತ ಅಮೃತವನುಣಿಸಿದೆ||
ನಾ ಬಂದಿಳಿದೆ ಈ ಭುವಿಗೆ
ಚೀರುತಲಿ ಹಂಬಲಿಸಿದೆ ತಾಯ ಮಡಿಲಿಗೆ
ನೋವ ನುಂಗಿ ನವಿರಾಗಿ ಮುತ್ತಿಡುತ ಅಮೃತವನುಣಿಸಿದೆ||
ಎನ್ನಬ್ಬೆ ಹೆತ್ತಬ್ಬೆ ಮೈದಡವಿದರೆ ಆನಂದ
ಎಷ್ಟು ಮೇಲೇರಿದರು ತಾಯಿಗೆ ಮಾತ್ರ ಕಂದ||
ಎಷ್ಟು ಮೇಲೇರಿದರು ತಾಯಿಗೆ ಮಾತ್ರ ಕಂದ||
✍️... ಅನಿತಾ ಜಿ.ಕೆ.ಭಟ್.
10-05-2020.
10-05-2020.
No comments:
Post a Comment