ಬೇಸಿಗೆಯಲ್ಲಿ ಮಾಡಿ ಮಾವಿನ ಹಣ್ಣಿನ ರುಚಿಕರ ಅಡುಗೆ ಗೊಜ್ಜು,ಸಾಸಿವೆ, ಸಾರು,ರಸಾಯನ
ಬೇಸಿಗೆ ಬಂತೆಂದರೆ ಹಣ್ಣುಗಳ ಹಬ್ಬ.ಮಾವು ಹಲಸು,ಸೀಬೆ,ಸಪೋಟ, ಪಪ್ಪಾಯಿ ... ಹೀಗೆ ತರತರದ ಹಣ್ಣುಗಳನ್ನು ಸವಿಯುವ ಭಾಗ್ಯ ನಮ್ಮದು.ಹಣ್ಣುಗಳ ರಾಜನೆಂದೇ ಪ್ರಸಿದ್ಧವಾದ ಮಾವಿನ ಹಣ್ಣುಗಳನ್ನು ಕಂಡರೆ ಬಾಯಲ್ಲಿ ನೀರೂರುವುದು ಸಹಜ.ನಮ್ಮ ಕರಾವಳಿಯಲ್ಲಿ ದೊರೆಯುವ ಕಾಡು ಮಾವಿನಹಣ್ಣು ಅಡುಗೆಯಲ್ಲಿ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.ಪ್ರತಿಯೊಂದು ಮರದ ಹಣ್ಣೂ ರುಚಿ, ಆಕಾರ,ಗಾತ್ರ,ತಿರುಳಿನ ಬಣ್ಣ ಮತ್ತು ರೀತಿಯಲ್ಲಿ ವಿಭಿನ್ನ.ಅಡುಗೆಯಲ್ಲಿ ಕಾಡುಮಾವಿನ ಹಣ್ಣು ಬಳಸಿದ್ದಾರೆಂದರೆ ಆ ದಿನ ಸ್ವಲ್ಪ ಅನ್ನ ಜಾಸ್ತಿಯೇ ಇಡಬೇಕೆಂದು ಲೆಕ್ಕ.ಅದರ ರುಚಿಯಿಂದಾಗಿ ಸ್ವಲ್ಪ ಅನ್ನ ಅಧಿಕವೇ ಉದರ ಸೇರುತ್ತದೆ.ನಮ್ಮಲ್ಲಿದೊರೆಯುವ ಹುಳಿಸಿಹಿ ಮಿಶ್ರ ರುಚಿಯ ದೊಡ್ಡಗಾತ್ರದ ಕಾಡುಮಾವಿನ ಹಣ್ಣಿನಲ್ಲಿ ಮಾಡಿದ ಅಡುಗೆಗಳ ವಿವರ ಇಲ್ಲಿದೆ.
ಮಾವಿನ ಹಣ್ಣಿನ ಗೊಜ್ಜು:-
ಬೇಕಾಗುವ ಸಾಮಗ್ರಿಗಳು:-
ಕಾಡು ಮಾವಿನ ಹಣ್ಣು 8, ಉಪ್ಪು ಒಂದೂವರೆ ಚಮಚ, ಮೆಣಸಿನ ಪುಡಿ ಒಂದು ಚಮಚ, ಬೆಲ್ಲ ರುಚಿಗೆ ತಕ್ಕಷ್ಟು, ಒಗ್ಗರಣೆಯ ಸಾಮಗ್ರಿಗಳು.
ಮಾಡುವ ವಿಧಾನ:-
ಕಾಡು ಮಾವಿನ ಹಣ್ಣನ್ನು ತೊಟ್ಟು ತೆಗೆದು ಎರಡು ಬದಿ ತುಂಡು ಮಾಡಿ. ತುಂಡುಗಳನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಅಥವಾ ಮಾವಿನ ಹಣ್ಣಿನ ಸಿಪ್ಪೆ ಸುಲಿದು ಸಿಪ್ಪೆಯನ್ನು ನೀರು ಹಾಕಿ ಕಿವುಚಿ. ಕಿವುಚಿದ ನೀರಿನೊಂದಿಗೆ ಹಣ್ಣನ್ನು ಪಾತ್ರೆಯಲ್ಲಿ ಹಾಕಿ ,ಉಪ್ಪು ಮೆಣಸಿನ ಪುಡಿ ,ಬೆಲ್ಲ ಸೇರಿಸಿ ಕುದಿಸಿ. ಖಾರ ಜಾಸ್ತಿ ಬೇಕಾದಲ್ಲಿ ಹಸಿಮೆಣಸು ಬಳಸಬಹುದು..ಕೊನೆಯಲ್ಲಿ ಒಗ್ಗರಣೆ ಕೊಡಿ..ಬಿಸಿ ಬಿಸಿ ಗೊಜ್ಜು ಅನ್ನದ ಜೊತೆ ಸಖತ್ತಾಗಿರುತ್ತದೆ.

ಮಾವಿನ ಹಣ್ಣಿನ ಸಾಸಿವೆ:-
ಬೇಕಾಗುವ ಸಾಮಗ್ರಿಗಳು:-
ಮಾವಿನ ಹಣ್ಣು ಎಂಟು, ತೆಂಗಿನ ತುರಿ ಎರಡು ಹಿಡಿ, ಒಂದು ಕೆಂಪು ಮೆಣಸು, ಒಂದು ಚಮಚ ಸಾಸಿವೆ, ಬೆಲ್ಲ, ಉಪ್ಪು.
ಮಾಡುವ ವಿಧಾನ:-
ಮಾವಿನ ಹಣ್ಣಿನ ಸಿಪ್ಪೆ ಸುಲಿದು ಬೆಲ್ಲ ಬೆರೆಸಿ. ಸಿಪ್ಪೆಯ ನೀರು ಸೇರಿಸಿ ಕಿವುಚಿ ಸೇರಿಸಿ. ಮಿಕ್ಸಿ ಜಾರಿಗೆ ತೆಂಗಿನ ತುರಿ ,ಸಾಸಿವೆ ,ಮೆಣಸು ಹಾಕಿ ರುಬ್ಬಿಕೊಳ್ಳಿ. ಮಾವಿನ ಹಣ್ಣಿನೊಂದಿಗೆ ಸೇರಿಸಿ.ಉಪ್ಪು ರುಚಿಗೆ ತಕ್ಕಷ್ಟು ಬೆರೆಸಿ. ರುಚಿಕರ ಸಾಸಿವೆ ಸಿದ್ದ.

ಮಾವಿನ ಹಣ್ಣಿನ ಕೂಟು ಸಾರು:-
ಬೇಕಾಗುವ ಸಾಮಗ್ರಿಗಳು:-
ಎಂಟು ಮಾವಿನ ಹಣ್ಣು, ಉಪ್ಪು ಬೆಲ್ಲ, ಕೆಂಪು ಮೆಣಸು, ಒಂದು ಚಮಚ ಕೊತ್ತಂಬರಿ ,ಅರ್ಧ ಚಮಚ ಜೀರಿಗೆ, ಕಾಲು ಚಮಚ ಮೆಂತೆ ,ಇಂಗು, ಎರಡು ಚಮಚ ತೆಂಗಿನ ತುರಿ,ಒಗ್ಗರಣೆಯ ಸಾಮಗ್ರಿಗಳು.
ಮಾಡುವ ವಿಧಾನ:-
ಎಂಟು ಮಾವಿನ ಹಣ್ಣಿನ ಸಿಪ್ಪೆ ಸುಲಿದು ಅಥವಾ ಹಣ್ಣನ್ನು ತುಂಡು ಮಾಡಿಕೊಂಡು ಬೆಲ್ಲ ಸೇರಿಸಿ.ಸಿಪ್ಪೆ ತೆಗೆದರೆ ಆ
ಸಿಪ್ಪೆಯನ್ನು ನೀರು ಸೇರಿಸಿ ಕಿವುಚಿ ನೀರನ್ನು ಸೇರಿಸಿ. ಉಪ್ಪು ರುಚಿಗೆ ತಕ್ಕಷ್ಟು ಬೆರೆಸಿ ಕುದಿಯಲು ಇಡಿ.
ಬಾಣಲೆಯಲ್ಲಿ ಎಣ್ಣೆ ಹಾಕಿ ಕೊತ್ತಂಬರಿ, ಮೆಂತೆ, ಜೀರಿಗೆ, ಕೆಂಪುಮೆಣಸು ,ಇಂಗು ಪರಿಮಳ ಬರುವಷ್ಟು ಹುರಿಯಿರಿ. ಇದನ್ನು ತೆಂಗಿನ ತುರಿಯೊಂದಿಗೆ ಮಿಕ್ಸಿಯಲ್ಲಿ ರುಬ್ಬಿ. ಈ ಮಿಶ್ರಣವನ್ನು ಕುದಿಯುತ್ತಿರುವ ಮಾವಿನ ಹಣ್ಣಿನ ಪಾತ್ರೆಗೆ ಹಾಕಿ ಸಾರಿನ ಹದಕ್ಕೆ ನೀರು ಸೇರಿಸಿ.. ಕುದಿಸಿ ಒಗ್ಗರಣೆ ಕೊಟ್ಟರೆ ಮಾವಿನ ಹಣ್ಣಿನ ಕೂಟು ಸಾರು ರೆಡಿ.
ಮಾವಿನ ಹಣ್ಣಿನ ರಸಾಯನ:-
ಬೇಕಾಗುವ ಪದಾರ್ಥಗಳು:-
ಎರಡು ಕಪ್ ಮಾವಿನ ಹಣ್ಣಿನ ಚಿಕ್ಕ ಹೋಳುಗಳು,ಒಂದು ಕಪ್ ಬೆಲ್ಲ,ತೆಂಗಿನಕಾಯಿ ತುರಿ ಎರಡು ಕಪ್,ಏಲಕ್ಕಿ ,ಎಳ್ಳು (ಬೇಕಾದಲ್ಲಿ)
ಮಾಡುವ ವಿಧಾನ:-
ಮಾವಿನ ಹಣ್ಣಿನ ತುಂಡಿಗೆ ಬೆಲ್ಲ ಬೆರೆಸಿಡಿ.ಮಿಕ್ಸಿ ಗೆ ತೆಂಗಿನ ತುರಿ,ಏಲಕ್ಕಿ ಹಾಕಿ ನೀರು ಸ್ವಲ್ಪ ಸೇರಿಸಿ ನುಣ್ಣಗೆ ರುಬ್ಬಿ.ಬಟ್ಟೆಯಲ್ಲಿ ಸೋಸಿ.ದಪ್ಪ ತೆಂಗಿನಕಾಯಿ ಹಾಲು ತೆಗೆದಿಡಿ.ಮತ್ತೊಮ್ಮೆ ನೀರು ಬೆರೆಸಿ ಹಾಲು ಹಿಂಡಿ.ದಪ್ಪ ಹಾಲನ್ನು ಸೇರಿಸಿ.ರಸಾಯನದ ಪಾಕದ ಅಂದಾಜು ನೋಡಿ ಬೇಕಾದರೆ ಎರಡನೇ ಸಲ ಹಿಂಡಿದ ಕಾಯಿಹಾಲು ಹಾಕಿ . ಎಳ್ಳನ್ನು ಪಟಪಟ ಸಿಡಿಸಿ ಮೇಲೆ ಹಾಕಿ.ಕೆಲವರು ಇದನ್ನು ಇಷ್ಟಪಡಲ್ಲ.ಹಾಕದಿದ್ದರೂ ಆಗುತ್ತದೆ.ನಾನು ಹಾಕಿಲ್ಲ.ಬೆಲ್ಲ ಕರಗಿದಾಗ ಹಾಗೆಯೇ ತಿನ್ನಲು ಕೊಡಬಹುದು.ಅಥವಾ ಫ್ರಿಡ್ಜ್ ನಲ್ಲಿ ಇಟ್ಟು ತಂಪಾದ ನಂತರವೂ ಸರ್ವ್ ಮಾಡಬಹುದು..
ಕಲರ್ ಫುಲ್ ರಸಾಯನ ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ.ಇದನ್ನು ತೆಳ್ಳವು (ನೀರ್ದೋಸೆ), ಉದ್ದಿನ ದೋಸೆ , ಇಡ್ಲಿಯ ಜೊತೆಗೆ ಕೂಡಾ ತಿನ್ನಬಹುದು.
ಈ ಬೇಸಿಗೆಯಲ್ಲಿ ಮಾವಿನ ಹಣ್ಣಿನ ವಿಶೇಷ ಅಡುಗೆಗಳನ್ನು ತಯಾರಿಸಿ ಸವಿಯಿರಿ.ಹೇಗಿತ್ತು ..ನಮಗೂ ತಿಳಿಸಿ..
✍️... ಅನಿತಾ ಜಿ.ಕೆ.ಭಟ್.
12-05-2020.

ಸಿದ್ದ.ಇದು ಹಸಿಯಾಗಿ ಉಣ್ಣುವ ಪದಾರ್ಥ.ಬೇಯಿಸುವ ಕ್ರಮವಿಲ್ಲ.ಉಳಿದರೆ ಫ್ರಿಜ್ ನಲ್ಲಿ ಇಡಬಹುದು.ಅಥವಾ ಕುದಿಸಿ ಕೆಡದಂತೆ ಕಾಪಾಡಬೇಕು.ಒಗ್ಗರಣೆ ಬೇಕಾದರೆ ಹಾಕಿಕೊಳ್ಳಬಹುದು.ನಾನು ಸಾಸಿವೆಗೆ ಒಗ್ಗರಣೆ ಹಾಕುವುದಿಲ್ಲ.
ಇದು ಅನ್ನ,ದೋಸೆ,ಚಪಾತಿಯ ಜೊತೆಗೆ ಸರಿಯಾಗಿ ಹೊಂದಿಕೆಯಾಗುತ್ತದೆ.ಇದೊಂದು ಬಗೆಯಿದ್ದರೂ ಸಾಕು ಊಟ ನಾಲ್ಕು ತುತ್ತು ಹೆಚ್ಚೇ ಉಂಡುಹೋಗುತ್ತದೆ.

ಮಾವಿನ ಹಣ್ಣಿನ ಕೂಟು ಸಾರು:-
ಬೇಕಾಗುವ ಸಾಮಗ್ರಿಗಳು:-
ಎಂಟು ಮಾವಿನ ಹಣ್ಣು, ಉಪ್ಪು ಬೆಲ್ಲ, ಕೆಂಪು ಮೆಣಸು, ಒಂದು ಚಮಚ ಕೊತ್ತಂಬರಿ ,ಅರ್ಧ ಚಮಚ ಜೀರಿಗೆ, ಕಾಲು ಚಮಚ ಮೆಂತೆ ,ಇಂಗು, ಎರಡು ಚಮಚ ತೆಂಗಿನ ತುರಿ,ಒಗ್ಗರಣೆಯ ಸಾಮಗ್ರಿಗಳು.
ಮಾಡುವ ವಿಧಾನ:-
ಎಂಟು ಮಾವಿನ ಹಣ್ಣಿನ ಸಿಪ್ಪೆ ಸುಲಿದು ಅಥವಾ ಹಣ್ಣನ್ನು ತುಂಡು ಮಾಡಿಕೊಂಡು ಬೆಲ್ಲ ಸೇರಿಸಿ.ಸಿಪ್ಪೆ ತೆಗೆದರೆ ಆ
ಸಿಪ್ಪೆಯನ್ನು ನೀರು ಸೇರಿಸಿ ಕಿವುಚಿ ನೀರನ್ನು ಸೇರಿಸಿ. ಉಪ್ಪು ರುಚಿಗೆ ತಕ್ಕಷ್ಟು ಬೆರೆಸಿ ಕುದಿಯಲು ಇಡಿ.
ಬಾಣಲೆಯಲ್ಲಿ ಎಣ್ಣೆ ಹಾಕಿ ಕೊತ್ತಂಬರಿ, ಮೆಂತೆ, ಜೀರಿಗೆ, ಕೆಂಪುಮೆಣಸು ,ಇಂಗು ಪರಿಮಳ ಬರುವಷ್ಟು ಹುರಿಯಿರಿ. ಇದನ್ನು ತೆಂಗಿನ ತುರಿಯೊಂದಿಗೆ ಮಿಕ್ಸಿಯಲ್ಲಿ ರುಬ್ಬಿ. ಈ ಮಿಶ್ರಣವನ್ನು ಕುದಿಯುತ್ತಿರುವ ಮಾವಿನ ಹಣ್ಣಿನ ಪಾತ್ರೆಗೆ ಹಾಕಿ ಸಾರಿನ ಹದಕ್ಕೆ ನೀರು ಸೇರಿಸಿ.. ಕುದಿಸಿ ಒಗ್ಗರಣೆ ಕೊಟ್ಟರೆ ಮಾವಿನ ಹಣ್ಣಿನ ಕೂಟು ಸಾರು ರೆಡಿ.

ಮಾವಿನ ಹಣ್ಣಿನ ರಸಾಯನ:-
ಬೇಕಾಗುವ ಪದಾರ್ಥಗಳು:-
ಎರಡು ಕಪ್ ಮಾವಿನ ಹಣ್ಣಿನ ಚಿಕ್ಕ ಹೋಳುಗಳು,ಒಂದು ಕಪ್ ಬೆಲ್ಲ,ತೆಂಗಿನಕಾಯಿ ತುರಿ ಎರಡು ಕಪ್,ಏಲಕ್ಕಿ ,ಎಳ್ಳು (ಬೇಕಾದಲ್ಲಿ)
ಮಾಡುವ ವಿಧಾನ:-
ಮಾವಿನ ಹಣ್ಣಿನ ತುಂಡಿಗೆ ಬೆಲ್ಲ ಬೆರೆಸಿಡಿ.ಮಿಕ್ಸಿ ಗೆ ತೆಂಗಿನ ತುರಿ,ಏಲಕ್ಕಿ ಹಾಕಿ ನೀರು ಸ್ವಲ್ಪ ಸೇರಿಸಿ ನುಣ್ಣಗೆ ರುಬ್ಬಿ.ಬಟ್ಟೆಯಲ್ಲಿ ಸೋಸಿ.ದಪ್ಪ ತೆಂಗಿನಕಾಯಿ ಹಾಲು ತೆಗೆದಿಡಿ.ಮತ್ತೊಮ್ಮೆ ನೀರು ಬೆರೆಸಿ ಹಾಲು ಹಿಂಡಿ.ದಪ್ಪ ಹಾಲನ್ನು ಸೇರಿಸಿ.ರಸಾಯನದ ಪಾಕದ ಅಂದಾಜು ನೋಡಿ ಬೇಕಾದರೆ ಎರಡನೇ ಸಲ ಹಿಂಡಿದ ಕಾಯಿಹಾಲು ಹಾಕಿ . ಎಳ್ಳನ್ನು ಪಟಪಟ ಸಿಡಿಸಿ ಮೇಲೆ ಹಾಕಿ.ಕೆಲವರು ಇದನ್ನು ಇಷ್ಟಪಡಲ್ಲ.ಹಾಕದಿದ್ದರೂ ಆಗುತ್ತದೆ.ನಾನು ಹಾಕಿಲ್ಲ.ಬೆಲ್ಲ ಕರಗಿದಾಗ ಹಾಗೆಯೇ ತಿನ್ನಲು ಕೊಡಬಹುದು.ಅಥವಾ ಫ್ರಿಡ್ಜ್ ನಲ್ಲಿ ಇಟ್ಟು ತಂಪಾದ ನಂತರವೂ ಸರ್ವ್ ಮಾಡಬಹುದು..
ಕಲರ್ ಫುಲ್ ರಸಾಯನ ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ.ಇದನ್ನು ತೆಳ್ಳವು (ನೀರ್ದೋಸೆ), ಉದ್ದಿನ ದೋಸೆ , ಇಡ್ಲಿಯ ಜೊತೆಗೆ ಕೂಡಾ ತಿನ್ನಬಹುದು.

ಈ ಬೇಸಿಗೆಯಲ್ಲಿ ಮಾವಿನ ಹಣ್ಣಿನ ವಿಶೇಷ ಅಡುಗೆಗಳನ್ನು ತಯಾರಿಸಿ ಸವಿಯಿರಿ.ಹೇಗಿತ್ತು ..ನಮಗೂ ತಿಳಿಸಿ..
✍️... ಅನಿತಾ ಜಿ.ಕೆ.ಭಟ್.
12-05-2020.
No comments:
Post a Comment