Sunday, 10 May 2020

ಅಮ್ಮನೆಂದರೆ ...ದೇವರು





'ವಿಶ್ವ ತಾಯಂದಿರ ದಿನ'ದ
ಶುಭಾಶಯಗಳು.



ಅಮ್ಮನೆಂದರೆ  ದೇವರು

ಅಮ್ಮನೆಂದರೆ ಅಕ್ಕರೆ ನೆನಪುಗಳೇ ಸಕ್ಕರೆ
ನೋವ ನುಂಗಿ  ಅಮ್ಮ ನಗುತಿರೆ
ಅರಿಯದ ಕಂದ ಬೊಚ್ಚುಬಾಯ್ದೆರೆ
ಹಿಗ್ಗಿನಲಿ ತೋರುವಳು ನಗೆಮೋರೆ...||


ನಡೆವ ದಾರಿಯ ಕಲ್ಲುಮುಳ್ಳ ಸರಿಸಿ
ತಪ್ಪಿದ ದಾರಿಗೆ ಗುರಿ ತೋರಿಸಿ
ತಿದ್ದಿ ತೀಡುವ ತಾಯೆನ್ನ ಮೊದಲ ಗುರು
ಮಾತಾಡಿಲ್ಲ ಎಂದೂ ಅವಳಿಗೆದುರು...||


ತೊದಲು ನುಡಿಗಳಿಗೆ ರೂಪ ನೀಡಿ
ಅಡೆತಡೆಗಳಿಗೆ ಸೆಡ್ಡು ಹೊಡೆದು
ಸಾಕಿಸಲಹಿರುವ ಪ್ರೇಮಮಯಿ
ಕೋಪಹಠಗಳ ಸಹಿಸಿದ ತಾಯಿ...||


ನನ್ನ ತುಂಟಾಟಗಳಿಗೆ ಲೆಕ್ಕವಿಟ್ಟಿಲ್ಲ
ಅದನೆಲ್ಲ ಮಾಡಿಹಳು ಸಾಧನೆಯ ಮೆಟ್ಟಿಲು
ಕಷ್ಟದಲಿ ಮೊದಲು ನೆನಪಾಗುವ ದೇವತೆ
ಇಷ್ಟದಲಿ ಸಂಸ್ಕಾರ ಕಲಿಸಿಹಳು ಮಾತೆ...||


ಚಿಂತೆನೋವುಗಳ ಒಳಗೆಳೆದು ನುಂಗಿ
ಹೊರಗೆ ತೊಟ್ಟಿಹಳು ಸಂತಸದ ಅಂಗಿ
ವಿಜಯವನೆ ಬಯಸುವಳು ನನ್ನ ಗಂಗಿ
ಅಪಜಯದಿ ಧೈರ್ಯ ತುಂಬುವ ಭಂಗಿ...||


ವೃದ್ಧಾಪ್ಯದಲಿ ಮಾತೆಯ ಸೇವೆಯಲ್ಲಿ
ತೊಡಗಿರುವ ಮಕ್ಕಳೇ ಧನ್ಯರಿಲ್ಲಿ
ನೆರಳಾಗಿ ನಡೆವಳು ಕುಡಿಗಳ ಆಸರೆಯಲ್ಲಿ
ಬಾಳ ಸಿಹಿಕಹಿಯಲಿ ಸವಿಯುಂಡು,    
ಬೆಂದು ಬಳಲಿ...||


ಮಾತೆಯ ಮರೆತು ಬಿಡದಿರಿ 
ಯೌವ್ವನದ ಹುರುಪಿನಲ್ಲಿ...
ಮತ್ತೆ ಬಳಲುವಿರಿ ಹೆತ್ತೊಡಲ 
ಬೇಗೆಯ ಶಾಪದಲ್ಲಿ...||


ತಾಯಂದಿರ ಗೌರವಿಸೋಣ
ತಾಯಂದಿರಿಗೆ ಸವಿಯನುಣಿಸೋಣ
ಇದು ಅನುದಿನದ ಅಭಿಯಾನ
ಆರೈಕೆ ಕಾಳಜಿಯಿರಲಿ ದಿನದಿನ...||



✍️... ಅನಿತಾ ಜಿ.ಕೆ.ಭಟ್.
10-05-2020.


No comments:

Post a Comment