ಆರೋಗ್ಯಕ್ಕಾಗಿ ಕೆಲವು ಸರಳ ಸಲಹೆಗಳು
ಇಂದು ನಾವು ದೈನಂದಿನ ಚಟುವಟಿಕೆಗಳಲ್ಲಿ ಒತ್ತಡವನ್ನು ಅನುಭವಿಸುತ್ತಾ ನಮ್ಮ ಆರೋಗ್ಯಕ್ಕೆ ಅಗತ್ಯವಿರುವ ನಿಯಮಗಳನ್ನು ಪಾಲಿಸುವುದನ್ನು ಮರೆಯುತ್ತೇವೆ.ಪರಿಸರ ಮಾಲಿನ್ಯ ,ವಾಯುಮಾಲಿನ್ಯ, ಅತಿಯಾದ ಜಂಕ್ ಫುಡ್ ಗಳು, ಅತಿಯಾದ ಟಿವಿ ಮೊಬೈಲ್, ಕಂಪ್ಯೂಟರ್ ಬಳಕೆ..ಇತ್ಯಾದಿಗಳು ನಮ್ಮ ಆರೋಗ್ಯವನ್ನು ಏರುಪೇರುಮಾಡುತ್ತವೆ.ಅದಕ್ಕಾಗಿ ಕೆಲವೊಂದು ಸುಲಭ ಸರಳವಾದ ಸಲಹೆಗಳು..
ಬಾಯಿ ಹುಣ್ಣು:-
ಕೆಲವರಿಗೆ ಬಾಯಲ್ಲಿ ಆಗಾಗ ಬಾಯಿಹುಣ್ಣು ಕಾಣಿಸಿಕೊಳ್ಳುತ್ತದೆ.ಹೋಟೇಲ್ ಆಹಾರ ಬಳಕೆ ಅನಿವಾರ್ಯವಾಗಿರುವವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುವುದು ಹೆಚ್ಚು.ಅತಿಯಾದ ಮಸಾಲೆ ಭರಿತ ಆಹಾರಗಳನ್ನು ಸೇವಿಸಿದಾಗ ಈ ತೊಂದರೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.ಸ್ವಲ್ಪ ಖಾರ ತಾಗಿದರೂ ಸಾಕು ಸಹಿಸಲಸಾಧ್ಯ ನೋವು ಕಾಡುತ್ತದೆ.
ಒಮ್ಮೊಮ್ಮೆ ಒಂದೆರಡು ಇದ್ದರೆ ಇನ್ನು ಕೆಲವೊಮ್ಮೆ ಐದಾರು.. ಅಬ್ಬಬ್ಬಾ..ನೋವು ಸಹಿಸಿಕೊಳ್ಳುವುದು ಎಷ್ಟು ಕಷ್ಟ.ಆಹಾರ ಸೇವಿಸುವುದು ಯಾತನೆ.ಇದಕ್ಕೆ ಪರಿಹಾರ ಇಲ್ಲಿದೆ.ಮಾಡಿ ನೋಡಿ.
ಎರಡು ಪೇರಳೆ /ಸೀಬೆ ಎಲೆಯ ಕುಡಿಗಳನ್ನು ತೆಗೆದುಕೊಂಡು ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿ.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ, ಈ ಕುಡಿಗಳನ್ನು ಚೆನ್ನಾಗಿ ಜಗಿದು ನಿಧಾನವಾಗಿ ರಸವನ್ನು ನುಂಗಬೇಕು.ಹುಣ್ಣುಗಳು ತುಂಬಾ ಇದ್ದರೆ ಮೂರು ಬಾರಿ ಪುನರಾವರ್ತನೆ ಮಾಡಬಹುದು.ಪೇರಳೆಕುಡಿಯಲ್ಲಿ ನೋವು ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕಗಳು ಇರುವುದರಿಂದ ಬೇಗನೆ ಬಾಯಿಹುಣ್ಣು ಗುಣವಾಗುವುದು.ಇದು ನಮ್ಮಲ್ಲಿ ಪರಂಪರೆಯಿಂದಲೂ ಬಳಸಿಕೊಂಡು ಬಂದಂತಹ ಸುಲಭ,ಸರಳ ಮನೆಮದ್ದು.
ಬಸಳೆಯ ಎಳೆಯ ಕುಡಿಗಳನ್ನು ಕೊಯ್ಧು ಸ್ವಚ್ಛಗೊಳಿಸಿ ಬಾಯಲ್ಲಿಟ್ಟುಕೊಂಡು ಚೆನ್ನಾಗಿ ಜಗಿದು ನಿಧಾನವಾಗಿ ನುಂಗಬೇಕು.ಇದು ಕೂಡ ಪರಿಣಾಮಕಾರಿ ವಿಧಾನ..
ಒಂದು ಚಮಚ ಜೀರಿಗೆ ಪುಡಿಯನ್ನು ರಾತ್ರಿ ಮಲಗುವ ಮುನ್ನ ಬಾಯಿಗೆ ಹಾಕಿಕೊಂಡು ನೀರು ಕುಡಿದರೆ ಬಾಯಿ ಹುಣ್ಣು ಶಮನವಾಗುವುದು..

ಕೇಶರಕ್ಷಣೆಗೆ ಸರಳ ಉಪಾಯಗಳು :-
ಸೊಂಪಾದ ಕೂದಲನ್ನು ಕಂಡಾಗ ಎಲ್ಲರ ಕಣ್ಣೂ ಅತ್ತ ನೆಟ್ಟು ವಾವ್ ..ಎನ್ನುವ ಉದ್ಗಾರವೊಂದು ಮನದೊಳಗೆ ಮೂಡದಿರದು.ಆಂತಹ ಕೇಶರಾಶಿಯನ್ನು ಬೆಳೆಸಿಕೊಳ್ಳುವುದು ಮತ್ತು ಇದ್ದುದನ್ನು ಉಳಿಸಿಕೊಳ್ಳುವುದು ಇಂದು ಸವಾಲಿನ ಸಂಗತಿಯೇ ಸರಿ.
ಮಿರಿಮಿರಿ ಮಿಂಚುವ ಕೂದಲು ಯಾರಿಗೆ ಇಷ್ಟವಿಲ್ಲ ಹೇಳಿ.ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರಿಗೂ ಇಷ್ಟ.ಆದರೆ ಕೂದಲನ್ನು ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟ.ಕೂದಲು ಉದುರುವುದು, ತಲೆಹೊಟ್ಟು,ಸೀಳು ಕೂದಲು,
ನರೆಗೂದಲು ಇತ್ಯಾದಿ ತೊಂದರೆ ಹಲವರನ್ನು ಕಾಡುತ್ತದೆ.ಇವುಗಳಿಗೆ ಪರಿಹಾರೋಪಾಯಗಳನ್ನು ನೋಡೋಣ.
ನರೆಗೂದಲು ಇತ್ಯಾದಿ ತೊಂದರೆ ಹಲವರನ್ನು ಕಾಡುತ್ತದೆ.ಇವುಗಳಿಗೆ ಪರಿಹಾರೋಪಾಯಗಳನ್ನು ನೋಡೋಣ.
1.ಭೃಂಗರಾಜ( ಅಂದರೆ ಗರುಗ) ಮತ್ತು ದಾಸವಾಳದ ಎಲೆಗಳನ್ನು ರುಬ್ಬಿ ತಲೆಗೆ ಹಚ್ಚಿ ಅರ್ಧ ಅಥವಾ ಒಂದು ಗಂಟೆ ಬಿಟ್ಟು ತೊಳೆಯಿರಿ.
2.ಮದುರಂಗಿ, ಲೋಳೆಸರ (ಅಲೊವೆರಾ), ದಾಸವಾಳದ ಎಲೆಗಳನ್ನು ಪೇಸ್ಟ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ, ಒಂದು ಗಂಟೆ ಬಿಟ್ಟು ತೊಳೆಯಿರಿ.
3.ಬಸಳೆಸೊಪ್ಪು ಮತ್ತು ಬ್ರಾಹ್ಮೀ ಎಲೆಗಳನ್ನು ಅರೆದು ಕೂದಲಿನ ಬುಡಕ್ಕೆ ಹಚ್ಚಬೇಕು.ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಚೆನ್ನಾಗಿ ಕೂದಲು ಬೆಳೆಯುತ್ತದೆ ಮತ್ತು ಕಣ್ಣಿಗೂ ತಂಪು.
4.ಬ್ರಾಹ್ಮೀ,ಗರುಗ, ದಾಸವಾಳದ ಸೊಪ್ಪು, ಲೋಳೆಸರ, ಬಸಳೆ ಸೊಪ್ಪು,ಮದುರಂಗಿ, ನೆಲ್ಲಿಕಾಯಿ ಇವುಗಳ ಪೇಸ್ಟ್ ನ್ನು ಎಣ್ಣೆಯ ಜೊತೆಗೆ ಕಾಯಿಸಿ ಸೋಸಿ ಸ್ವಲ್ಪ ಮೆಂತೆ ಕಾಳು ಹಾಕಿ ಬಾಟಲಿಯಲ್ಲಿ ಇರಿಸಿಕೊಳ್ಳುವುದು. ಇದು ಉತ್ತಮ ನಿತ್ಯೋಪಯೋಗಿ ಕೇಶತೈಲ.
ಇದಲ್ಲದೇ ತಲೆಗೆ ಸ್ನಾನ ಮಾಡುವಾಗ ಮಿತವಾಗಿ ಸಾಬೂನು ಬಳಸಿ.ಕಡಲೆಹಿಟ್ಟನ್ನು ಸಹ ಬಳಸಬಹುದು.. ಸ್ನಾನದ ನಂತರ ಕೂದಲನ್ನು ಸರಿಯಾಗಿ ಒಣಗುವಂತೆ ನೋಡಿಕೊಳ್ಳಿ.
ಮೇಲೆ ತಿಳಿಸಿದ ಯಾವುದೇ ಪೇಸ್ಟನ್ನು ತಲೆಗೆ ಹಚ್ಚಿದರೂ ಸ್ನಾನ ಮಾಡುವಾಗ ಅವು ಕಿವಿಗಳಿಗೆ ಹೋಗದಂತೆ ಜಾಗ್ರತೆ ವಹಿಸಬೇಕು.(ಸೋಂಕು ತಗುಲುವ ಸಾಧ್ಯತೆ ಇದೆ.) ಸೊಂಪಾದ ಕೇಶ ಹೆಚ್ಚಿಸುವುದು ಆತ್ಮವಿಶ್ವಾಸ.ಮತ್ಯಾಕೆ ತಡ.. ಈ ಸಂಡೇ ನಿಮ್ಮ ಮಂಡೆಯನ್ನು ಥಂಡಾ ಥಂಡಾ ಮಾಡಿಕೊಳ್ಳಿ.
ಕೇಶ ತೈಲ
ದಟ್ಟವಾದ ಕಪ್ಪನೆಯ ಕೇಶರಾಶಿಯನ್ನು ಉಳಿಸಿಕೊಳ್ಳಲು ಬಯಸುವವರು ಮನೆಯಲ್ಲಿ ತಯಾರಿಸುವ ಕೇಶತೈಲಗಳಿಗೆ ಮೊರೆ ಹೋಗಬಹುದು.ಜಾಹೀರಾತುಗಳಲ್ಲಿ ಕಂಡ ಶ್ಯಾಂಪೂ, ಕೇಶ ತೈಲ ಗಳನ್ನು ಬಳಸಿ ಸುಸ್ತಾದವರಿಗೆ ಹಿತ್ತಲಿನಲ್ಲಿ ಬೆಳೆಯುವ ಔಷಧೀಯ ಗಿಡಮೂಲಿಕೆ ಗಳಿಂದ ನಿತ್ಯೋಪಯೋಗಿ ಕೇಶತೈಲ ತಯಾರಿಸುವ ವಿಧಾನವನ್ನು ತಿಳಿಸುತ್ತಿದ್ದೇನೆ.
ಬಳಸುವ ಗಿಡಮೂಲಿಕೆಗಳು:_
*ಭೃಂಗರಾಜ/ಗರುಗ_Eclipta prostrata
*ಲೋಳೆಸರ_Aloevera
*ಮದುರಂಗಿ_Lawsonia intermis
*ಬ್ರಾಹ್ಮೀ_Centella asiatica
*ನೆಲ್ಲಿ/ಕಿರು ನೆಲ್ಲಿ_Phyllanthus emblica/Phyllanthus niruri
*ದಾಸವಾಳದ ಪತ್ರೆ_hibiscus
*ಹಾಡೇ ಸೊಪ್ಪು_Cyclea peltata
*ಕರಿಬೇವು_Curry leaves
*ಜಾಜಿ ಮಲ್ಲಿಗೆ ಪತ್ರೆ_Jasminum grandiflora
*ಬಸಳೆ ಸೊಪ್ಪು_spinach
*ಲೋಳೆಸರ_Aloevera
*ಮದುರಂಗಿ_Lawsonia intermis
*ಬ್ರಾಹ್ಮೀ_Centella asiatica
*ನೆಲ್ಲಿ/ಕಿರು ನೆಲ್ಲಿ_Phyllanthus emblica/Phyllanthus niruri
*ದಾಸವಾಳದ ಪತ್ರೆ_hibiscus
*ಹಾಡೇ ಸೊಪ್ಪು_Cyclea peltata
*ಕರಿಬೇವು_Curry leaves
*ಜಾಜಿ ಮಲ್ಲಿಗೆ ಪತ್ರೆ_Jasminum grandiflora
*ಬಸಳೆ ಸೊಪ್ಪು_spinach
ಇವುಗಳಲ್ಲಿ ಎಲ್ಲವೂ ನಿಮಗೆ ಲಭ್ಯವಾಗದಿರಬಹುದು. ಆದರೆ ಯಾವುದೆಲ್ಲ ದೊರಕುವುದೋ ಅದನ್ನು ಬಳಸಿಕೊಂಡು ಕೇಶತೈಲವನ್ನು ತಯಾರಿಸಿಕೊಳ್ಳಿ..
ಈ ಗಿಡಮೂಲಿಕೆ ಗಳನ್ನು ಬೆಳಗಿನ ಹೊತ್ತಿನಲ್ಲಿ ಕೊಯ್ದು ಚೆನ್ನಾಗಿ ತೊಳೆದುಕೊಳ್ಳಬೇಕು.
ಇವುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಗಟ್ಟಿ ರುಬ್ಬಿ
ಎಣ್ಣೆಯಲ್ಲಿ ಕುದಿಸಿ.ಸಾಮಾನ್ಯ ಒಂದು ಕಪ್ ರುಬ್ಬಿದ ಮಿಶ್ರಣಕ್ಕೆ ಎರಡು ಕಪ್ ಎಣ್ಣೆ ಬಳಸಬಹುದು..( ನಾವು ಕರಾವಳಿಯಲ್ಲಿ ಬಳಸುವುದು ತೆಂಗಿನೆಣ್ಣೆ.ಅವರವರ ಊರಿನಲ್ಲಿ ತಲೆಕೂದಲಿಗೆ ಯಾವ ತೈಲ ಹಚ್ಚಿಕೊಳ್ಳುತ್ತಾರೋ ಅದನ್ನೇ ಬಳಸಬಹುದು.)
ಕುದಿದು ನೀರಿನ ಅಂಶ ಆವಿಯಾಗಬೇಕು.. ಸ್ವಲ್ಪ ಸಮಯ ಬೇಕಾಗುತ್ತದೆ..ಆಗ ಕುದಿಯುವ ಶಬ್ದ ನಿಲ್ಲುವುದು... ಇದನ್ನು ತೇವಾಂಶವಿಲ್ಲದ ಪಾತ್ರೆಗೆ ಸೋಸಿ.ತಣ್ಣಗಾದ ನಂತರ ಬಾಟಲಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಕೂದಲಿಗೆ ಬಳಸಬಹುದು.
ಇವುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಗಟ್ಟಿ ರುಬ್ಬಿ
ಎಣ್ಣೆಯಲ್ಲಿ ಕುದಿಸಿ.ಸಾಮಾನ್ಯ ಒಂದು ಕಪ್ ರುಬ್ಬಿದ ಮಿಶ್ರಣಕ್ಕೆ ಎರಡು ಕಪ್ ಎಣ್ಣೆ ಬಳಸಬಹುದು..( ನಾವು ಕರಾವಳಿಯಲ್ಲಿ ಬಳಸುವುದು ತೆಂಗಿನೆಣ್ಣೆ.ಅವರವರ ಊರಿನಲ್ಲಿ ತಲೆಕೂದಲಿಗೆ ಯಾವ ತೈಲ ಹಚ್ಚಿಕೊಳ್ಳುತ್ತಾರೋ ಅದನ್ನೇ ಬಳಸಬಹುದು.)
ಕುದಿದು ನೀರಿನ ಅಂಶ ಆವಿಯಾಗಬೇಕು.. ಸ್ವಲ್ಪ ಸಮಯ ಬೇಕಾಗುತ್ತದೆ..ಆಗ ಕುದಿಯುವ ಶಬ್ದ ನಿಲ್ಲುವುದು... ಇದನ್ನು ತೇವಾಂಶವಿಲ್ಲದ ಪಾತ್ರೆಗೆ ಸೋಸಿ.ತಣ್ಣಗಾದ ನಂತರ ಬಾಟಲಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಕೂದಲಿಗೆ ಬಳಸಬಹುದು.
ಸಮಸ್ಯೆಗಳಾದ ತಲೆಹೊಟ್ಟು, ಕೂದಲುದುರುವಿಕೆ, ಕಣ್ಣುರಿ, ನಿದ್ರಾಹೀನತೆ ನಿವಾರಿಸುತ್ತದೆ.
ಮಾಡಿ ಬಳಸಿ ನೋಡಿ.
ಮಾಡಿ ಬಳಸಿ ನೋಡಿ.
ಸುಂದರ ಮೊಗಕೆ
ಕೇಶವೆ ಭೂಷಣ
ತಲೆಯ ಸಮಸ್ಯೆಗೆ
ಚಿಂತಿಸದಿರಿ ಕ್ಷಣ||
ಕೇಶವೆ ಭೂಷಣ
ತಲೆಯ ಸಮಸ್ಯೆಗೆ
ಚಿಂತಿಸದಿರಿ ಕ್ಷಣ||
ಹಿತ್ತಲ ಪತ್ರೆಯ
ನುಣ್ಣಗೆ ಅರೆದು
ಎಣ್ಣೆಲಿ ಕರಿದು
ತಣ್ಣನೆ ಶಿರಕೆ
ಬಣ್ಣವು ಕೇಶಕೆ||
ನುಣ್ಣಗೆ ಅರೆದು
ಎಣ್ಣೆಲಿ ಕರಿದು
ತಣ್ಣನೆ ಶಿರಕೆ
ಬಣ್ಣವು ಕೇಶಕೆ||
ಮೆರುಗಿನ ಕೇಶದಿ
ಮೆರೆಯಿರಿ ನೀವು
ಮರೆಯದೆ ಮೆತ್ತಿರಿ
ಶಿರದಲಿ ತೈಲವ||
ಮೆರೆಯಿರಿ ನೀವು
ಮರೆಯದೆ ಮೆತ್ತಿರಿ
ಶಿರದಲಿ ತೈಲವ||
ಕೇಶಾರೋಗ್ಯಕ್ಕಾಗಲೀ ಬಾಯಿಯ ಆರೋಗ್ಯಕ್ಕಾಗಲೀ ಇವಿಷ್ಟು ಮಾತ್ರ ಸಾಕಾಗಲಾರದು.. ಸಮಯಕ್ಕೆ ಸರಿಯಾಗಿ ಪೌಷ್ಟಿಕಾಂಶ ಇರುವ ಊಟ- ಸೇವನೆ, ಕಣ್ತುಂಬ ನಿದ್ರೆ ಕೂಡ ಅವಶ್ಯಕ.ಮಾನಸಿಕ ನೆಮ್ಮದಿ, ಅತಿಯಾಗಿ ಒತ್ತಡದಲ್ಲಿ ಸಿಲುಕಿರುವುದು ಮುಖ್ಯ.ಕೆಲವು ಔಷಧಗಳ ಅಡ್ಡಪರಿಣಾಮದಿಂದಾಗಿ ಕೂಡಾ ಕೂದಲುದುರಬಹುದು.ಅದನ್ನು ಪತ್ತೆ ಹಚ್ಚಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.




✍️...ಅನಿತಾ ಜಿ.ಕೆ.ಭಟ್
26-05-2020.
26-05-2020.
No comments:
Post a Comment