ನನಗಿದ್ದ ಅಳುಕೀಗ ನಿರಾಳವಾಯ್ತು
ನನಗೆ ಅಳುಕಿತ್ತು
ನೀ ಅದರ ಹೇಗೆ ಎದುರುಗೊಳುವೆಯೆಂದು
ಮನೆಯೊಳಗೆ ಸ್ವಾಗತಿಸುವೆಯೆಂದು
ನಿನ್ನೊಡನೆ ಜತೆಗಾರನಂತೆ ಸ್ವೀಕರಿಸುವೆಯೆಂದು..
ನೀ ಅದರ ಹೇಗೆ ಎದುರುಗೊಳುವೆಯೆಂದು
ಮನೆಯೊಳಗೆ ಸ್ವಾಗತಿಸುವೆಯೆಂದು
ನಿನ್ನೊಡನೆ ಜತೆಗಾರನಂತೆ ಸ್ವೀಕರಿಸುವೆಯೆಂದು..
ನನಗೆ ಬಲು ಆಸೆಯಿತ್ತು
ನೀನದರ ಜೊತೆ ನಿನ್ನ ಆಟಿಕೆಯ ಹಂಚಿಕೊಳ್ಳಬೇಕೆಂದು
ಮುದ್ದಾದ ಕೈ ಹಿಡಿದು ನಲಿಯಬೇಕೆಂದು
ನಿನ್ನ ಸಿಹಿತುತ್ತಲಿ ಪಾಲುಕೊಡಬೇಕೆಂದು...
ನೀನದರ ಜೊತೆ ನಿನ್ನ ಆಟಿಕೆಯ ಹಂಚಿಕೊಳ್ಳಬೇಕೆಂದು
ಮುದ್ದಾದ ಕೈ ಹಿಡಿದು ನಲಿಯಬೇಕೆಂದು
ನಿನ್ನ ಸಿಹಿತುತ್ತಲಿ ಪಾಲುಕೊಡಬೇಕೆಂದು...
ನನಗೆ ಕನಸಿತ್ತು
ನಾನಿಬ್ಬರ ಹೊತ್ತು ಭುವಿಗಿಳಿಸಬೇಕೆಂದು
ಅವರಾಟ ಪಾಠದೊಳು ನಾ ಮತ್ತೆ ಮಗುವಾಗಬೇಕೆಂದು
ಪ್ರೇಮದ ಕಡಲಲ್ಲಿ ಎರಡು ಮುತ್ತುಗಳ ಪೋಣಿಸಬೇಕೆಂದು...
ನಾನಿಬ್ಬರ ಹೊತ್ತು ಭುವಿಗಿಳಿಸಬೇಕೆಂದು
ಅವರಾಟ ಪಾಠದೊಳು ನಾ ಮತ್ತೆ ಮಗುವಾಗಬೇಕೆಂದು
ಪ್ರೇಮದ ಕಡಲಲ್ಲಿ ಎರಡು ಮುತ್ತುಗಳ ಪೋಣಿಸಬೇಕೆಂದು...
ನನಗೆ ಬೇಸರವಿತ್ತು
ಈ ಉದರದ ಭಾರ ನನಗೊಬ್ಬಳಿಗೇಯೆಂದು
ಅರ್ಧಾಂಗಿಯೊಡನೆ ಸಮಪಾಲು ಅವ ಹೊರಲಾರನೆಂದು
ನಲಿವಿನಲಿ ಭಾಗಿಯಾದವ ನೋವಿನಲಿ ದೂರನಿಲುವನೆಂದು...
ಈ ಉದರದ ಭಾರ ನನಗೊಬ್ಬಳಿಗೇಯೆಂದು
ಅರ್ಧಾಂಗಿಯೊಡನೆ ಸಮಪಾಲು ಅವ ಹೊರಲಾರನೆಂದು
ನಲಿವಿನಲಿ ಭಾಗಿಯಾದವ ನೋವಿನಲಿ ದೂರನಿಲುವನೆಂದು...
ನನ್ನ ಮೊಗವರಳಿತ್ತು
ಅಳುವ ದನಿ ಕೇಳಿ ಬಂದಿತೆಂದು
ಈ ನೋವು ಆ ಕಾಯುವಿಕೆ ಕೊನೆಯಾಯಿತೆಂದು
ಈ ಮಡಿಲ ಮತ್ತೊಂದು ಮೊಗ್ಗು ಅರಳಿತೆಂದು...
ಅಳುವ ದನಿ ಕೇಳಿ ಬಂದಿತೆಂದು
ಈ ನೋವು ಆ ಕಾಯುವಿಕೆ ಕೊನೆಯಾಯಿತೆಂದು
ಈ ಮಡಿಲ ಮತ್ತೊಂದು ಮೊಗ್ಗು ಅರಳಿತೆಂದು...
ನನ್ನ ಚಿಂತೆ ಮಾಯವಾಯ್ತು
ಅತ್ತಾಗ ನೀ ಬಂದು ತೊದಲು ನುಡಿಯಲಿ ಲಾಲಿ ಹಾಡಿದೆಯೆಂದು
ಅಳಬೇಡ ನಾನಿರುವೆ ಎನುತ ಸಂತೈಸಿದೆಯೆಂದು
ತೊಟ್ಟಿಲಲಿ ಬೆಚ್ಚಗೆ ಹೊದೆಸಿ ಜೀಕಿದೆಯೆಂದು...
ಅತ್ತಾಗ ನೀ ಬಂದು ತೊದಲು ನುಡಿಯಲಿ ಲಾಲಿ ಹಾಡಿದೆಯೆಂದು
ಅಳಬೇಡ ನಾನಿರುವೆ ಎನುತ ಸಂತೈಸಿದೆಯೆಂದು
ತೊಟ್ಟಿಲಲಿ ಬೆಚ್ಚಗೆ ಹೊದೆಸಿ ಜೀಕಿದೆಯೆಂದು...
ನನಗೆ ಅರಿವಾಯ್ತು
ನಿನ್ನ ಒಂಟಿತನವೀಗ ನೀಗಿತೆಂದು
ಜಂಟಿಯಾಗಿ ಆಡುವ ಆನಂದ ದೊರಕಿತೆಂದು
ಹುಸಿಕೋಪ ತುಂಟಾಟ ಸೋದರ ಬಾಂಧವ್ಯವೆಂದು...
ನಿನ್ನ ಒಂಟಿತನವೀಗ ನೀಗಿತೆಂದು
ಜಂಟಿಯಾಗಿ ಆಡುವ ಆನಂದ ದೊರಕಿತೆಂದು
ಹುಸಿಕೋಪ ತುಂಟಾಟ ಸೋದರ ಬಾಂಧವ್ಯವೆಂದು...
ನನಗೆ ನಿರಾಳವಾಯ್ತು
ನೀನವನ ಕೈಹಿಡಿದು ಶಾಲೆಗೆ ಹೊರಟದಿನದಂದು
ಅಕ್ಕರೆಯಲಿ ಹೆಜ್ಜೆಯೊಡನೆ ಹೆಜ್ಜೆಯಿರಿಸಿದಂದು
ಅನ್ಯೋನ್ಯ ಅನುಬಂಧ ಭದ್ರವಾಗಿದೆಯೆಂದು...
ನೀನವನ ಕೈಹಿಡಿದು ಶಾಲೆಗೆ ಹೊರಟದಿನದಂದು
ಅಕ್ಕರೆಯಲಿ ಹೆಜ್ಜೆಯೊಡನೆ ಹೆಜ್ಜೆಯಿರಿಸಿದಂದು
ಅನ್ಯೋನ್ಯ ಅನುಬಂಧ ಭದ್ರವಾಗಿದೆಯೆಂದು...
✍️... ಅನಿತಾ ಜಿ.ಕೆ.ಭಟ್.
16-05-2020.
16-05-2020.
No comments:
Post a Comment