Friday, 1 May 2020

ದಾಸವಾಳ ಹೂವಿನ ಶರಬತ್ತು 🌺🌺🌺🌺🌺🌺🌺🌺🌺🌺🌺

ದಾಸವಾಳದ ಶರಬತ್ತು:-

     ಮನೆಯಂಗಳದಲ್ಲಿ ದೊರೆಯುವಂತಹ  ದಾಸವಾಳದ ಹೂಗಳು ಅಂಗಳದ ಸೌಂದರ್ಯವನ್ನು ಹೆಚ್ಚಿಸುತ್ತವೆ. ದೇವರಿಗೆ ಸುಂದರವಾಗಿ ಅಲಂಕಾರವಾಗುತ್ತವೆ.ಅಷ್ಟೇ ಅಲ್ಲದೆ ಇವು ನಮ್ಮ ಕೇಶ ಸೌಂದರ್ಯವನ್ನು ಕಾಪಾಡಲು ,ಸುಖ ನಿದ್ರೆಗೆ ಸಹಕಾರಿ. ಇಂತಹ ದಾಸವಾಳದ ಹೂಗಳಿಂದ ತಾಜಾ ತಂಪಾದ ಶರಬತ್ತನ್ನು ತಯಾರಿಸಬಹುದು.ಬೇಸಗೆಯ ದಾಹ ತಣಿಸಲು ಸಹಕಾರಿ.

ಬೇಕಾದ ಸಾಮಗ್ರಿಗಳು:-

ಎಂಟು ದಾಸವಾಳದ ಹೂಗಳು
4 ಚಮಚ ಸಕ್ಕರೆ
ಎರಡು ಲೋಟ ನೀರು
ಒಂದು ಚಮಚ ನಿಂಬೆ ಹಣ್ಣಿನ ರಸ

ತಯಾರಿಸುವ ವಿಧಾನ:-

2 ಕಪ್ ನೀರನ್ನು 4 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ. ಸ್ಟವ್ ಆಫ್ ಮಾಡಿ.  ಶುಚಿಗೊಳಿಸಿದ ದಾಸವಾಳದ ಹೂವುಗಳ ಎಸಳುಗಳನ್ನು ಹಾಕಿ . 15 ನಿಮಿಷಗಳ ನಂತರ ಅದನ್ನು ಸೋಸಿ.ಇದನ್ನು ಫ್ರಿಜ್ ನಲ್ಲಿಟ್ಟುಕೊಂಡು ಒಂದು ವಾರದವರೆಗೂ ಬಳಸಬಹುದು.ಸೋಸಿದ ಮಿಶ್ರಣಕ್ಕೆ ನಿಂಬೆ ಹಣ್ಣಿನ ರಸ ಸೇರಿಸಿ.ಬಣ್ಣ ಗಾಢವಾಗುತ್ತದೆ. ದಾಸವಾಳದ ಶರಬತ್ತನ್ನು ಸರ್ವ್ ಮಾಡಿ. ಬೇಕಾದರೆ ಫ್ರಿಜ್ ನಲ್ಲಿ ಇಟ್ಟುಕೊಂಡು ಸರ್ವ್ ಮಾಡಬಹುದು.


                  🌺🌺

✍️... ಅನಿತಾ ಜಿ.ಕೆ.ಭಟ್.
02-05-2020.

2 comments:

  1. ಹಿಂದೆಯೂ ಬಳಕೆಯಲ್ಲಿತ್ತು... ಥ್ಯಾಂಕ್ಯೂ 💐🙏.

    ReplyDelete