ಬುಗುರಿಯ ಆಟ
ಗಿರಿಗಿರಿ ತಿರುಗುವ ಬುಗುರಿಯ
ಕಂಡು ಅರಳಿದೆ ಮಕ್ಕಳ ಮನಸು
ಹಿರಿಹಿರಿ ಹಿಗ್ಗಿದ ಪುಟಾಣಿ ಮನಸಲಿ
ತುಂಬಿದೆ ಬುಗುರಿಯ ಕನಸು...||೧||
ಕಂಡು ಅರಳಿದೆ ಮಕ್ಕಳ ಮನಸು
ಹಿರಿಹಿರಿ ಹಿಗ್ಗಿದ ಪುಟಾಣಿ ಮನಸಲಿ
ತುಂಬಿದೆ ಬುಗುರಿಯ ಕನಸು...||೧||
ಚೂಪಿನ ತಳದಲಿ ಜೋಪಾನ
ಮಾಡಿದೆ ತನ್ನಯ ದೇಹ
ಪುಟ್ಟಗೆ ಜಾತ್ರೆಲಿ ಕೊಳಬೇಕೆಂಬ
ಆಸೆಯು ತೀರದ ಮೋಹ...||೨||
ಮಾಡಿದೆ ತನ್ನಯ ದೇಹ
ಪುಟ್ಟಗೆ ಜಾತ್ರೆಲಿ ಕೊಳಬೇಕೆಂಬ
ಆಸೆಯು ತೀರದ ಮೋಹ...||೨||
ಅಂಗೈಯಲ್ಲಿ ತಿರುವುವ ಗೆಳೆಯನ
ಕೈಗಳ ಮೇಲೆ ಬುಗುರಿಯ ನಾಟ್ಯ
ತಂಗಿಗೂ ಪುಟ್ಟಗೂ ಬುಗುರಿಯು
ಬಂತು ಮರೆತೇ ಹೋಯ್ತು ಪಠ್ಯ...||೩||
ಕೈಗಳ ಮೇಲೆ ಬುಗುರಿಯ ನಾಟ್ಯ
ತಂಗಿಗೂ ಪುಟ್ಟಗೂ ಬುಗುರಿಯು
ಬಂತು ಮರೆತೇ ಹೋಯ್ತು ಪಠ್ಯ...||೩||
ಉದ್ದನೆ ದಾರದಿ ಭರದಿಂ ಎಳೆದು
ರಭಸದಿ ಬಿಟ್ಟನು ಪುಟ್ಟ
ಸುತ್ತಲು ತಿರುಗಿ ಜಗಲಿಯ ಕೆಳಗೆ
ಜಾರಿತು ಬುಗುರಿಯು ರಟ್ಟಿ...||೪||
ರಭಸದಿ ಬಿಟ್ಟನು ಪುಟ್ಟ
ಸುತ್ತಲು ತಿರುಗಿ ಜಗಲಿಯ ಕೆಳಗೆ
ಜಾರಿತು ಬುಗುರಿಯು ರಟ್ಟಿ...||೪||
ಪುಟ್ಟನ ಕಣ್ಣು ತುಂಬಿತ್ತು
ಒಂದೇ ಬುಗುರಿಯು ಎರಡಾಗಿ
ತಂಗಿಯು ನುಡಿದಳು ನನ್ನಯ
ಬುಗುರಿಲಿ ಆಡುವ ನಾವು ಜೊತೆಯಾಗಿ...||೫||
ಒಂದೇ ಬುಗುರಿಯು ಎರಡಾಗಿ
ತಂಗಿಯು ನುಡಿದಳು ನನ್ನಯ
ಬುಗುರಿಲಿ ಆಡುವ ನಾವು ಜೊತೆಯಾಗಿ...||೫||
✍️... ಅನಿತಾ ಜಿ.ಕೆ.ಭಟ್.
09-05-2020.
09-05-2020.
👌👌
ReplyDeleteThank you..
ReplyDelete