Sunday, 30 August 2020

ಚರಣ ನಮನ

 


    ಚರಣ ನಮನ

ಭಾರತ ಮಾತೆಯ ಕುವರರು ನಾವು
ಮಾತೆಯ ಚರಣಕೆ ನಮಿಸೋಣ
ಸತ್ಯ ಪ್ರೀತಿ  ಅಹಿಂಸೆಯಿಂದ
ವಿಶ್ವದ ಜನಮನ ಗೆಲ್ಲೋಣ||೧||

ಪುಣ್ಯದ ಮಣ್ಣಿದು ಮಹಿಮರ ನೆಲವಿದು
ಸಿರಿ ಸಂಸ್ಕೃತಿಯ ನೆಲೆವೀಡು
ಹಸಿರಿನ ತೋಪಿದು ಶಾಂತಿಯ ಬೀಡಿದು
ಭವ್ಯ ಭಾರತಿಯ ನೆಲೆನಾಡು||೨||

ಹತ್ತಿಯ ಬಿಳುಪಿನ ಹಿಮಗಿರಿ ಶಿರವು
ಹಾಲ್ನೊರೆ ಜಲಧಿಯು ತೊಳೆವ ಚರಣವು
ಉತ್ತರ ದಕ್ಷಿಣ ಹಬ್ಬಿದ ಬಾಹುವು
ಭಾರತ ಮಾತೆಯ ಚೆಲುನಾಡು||೩||

ಭಾಷೆಯು ಹಲವು ಮತವದು ಕೆಲವು
ಐಕ್ಯತೆಯೆ ಮಂತ್ರ ಘೋಷವು
ನಿನ್ನಯ ಮಡಿಲು ಶೂರರ ಒಡಲು
ಧೈರ್ಯ ಸಾಹಸದ ಗುಡಿನೋಡು||೪||

ಸಾಧು ಸಂತರು ಋಷಿಮುನಿಗಳು
ವಿವೇಕಾನಂದ ಪರಮಹಂಸರು
ಜಗದಲಿ ಅರಿವಿನ ಜ್ಯೋತಿಯ ಬೆಳಗಿದ
ಸಾಧಕ ಗಡಣದ ತರವಾಡು||೫||

✍️... ಅನಿತಾ ಜಿ.ಕೆ.ಭಟ್.
30-08-2020.

             


2 comments: